ಹಾವೇರಿ: ಜಿಲ್ಲೆಯ ರಾಣೇಬೆನ್ನೊರು ತಾಲೂಕು ಕಾರ್ಮಿಕ ಇಲಾಖೆ ನಿರೀಕ್ಷಕಿಯಾದ ಮಮ್ರಾಜ್ ಬೇಗಂ ಕಾರ್ಮಿಕ ಕಾರ್ಡ ಮಾಡಿಕೊಡಲು 5000 ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಾರಾಯಣಪ್ಪ ಎಂಬ ಕಾರ್ಮಿಕನಿಗೆ ಕಾರ್ಮಿಕ ಕಾರ್ಡ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಹಾಗೂ ಪೋಲಿಸ ಇನ್ಸ್‌ಪೆಕ್ಟರ್ ಆಂಜನೇಯ ಮತ್ತು ಮುಸ್ತಾಕ ಶೇಖ್ ತಂಡದವರು ದಾಳಿಯಲ್ಲಿ ಭಾಗವಹಿಸಿದ್ದರು.