ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲ ಪ್ರಳಯ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಸಮಗ್ರ ಪ್ರಭ ಸುದ್ದಿ
1 Min Read

ಹುಬ್ಬಳ್ಳಿ: ವಿಜಯ ದಶಮಿಯಿಂದ ಸಂಕ್ರಾಂತಿವರೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ದುರಂತಗಳು ಆಗುತ್ತವೆ. ಒಂದೆರಡು ರಾಷ್ಟಗಳು ನಿರ್ನಾಮವಾಗಲಿವೆ. ಜನರು ಅಕಾಲಿಕ ಮೃತ್ಯು ಆಗುವ ಸೂಚನೆ ಇದೆ. ಭಾರತವು ಅದಕ್ಕೆ ಹೊರತಾಗಿಲ್ಲ. ಆದರೆ ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು. ಇಲ್ಲವಾದರೆ ಆಪತ್ತು ಕಟ್ಟಿಟ್ಟಬುತ್ತಿ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಎಲ್ಲೋ ಬಾಂಬ್‌ ದಾಳಿಯಾಗಿ ವಾಯುಮಾಲಿನ್ಯವುಂಟಾಗಿ ಜನರು ಅಕಾಲಿಕ ಮರಣ ಹೊಂದುತ್ತಾರೆ. ಅದು ಭಾರತದ ಮೇಲೂ ಪರಿಣಾಮ ಬೀರಲಿದೆ. ವಿಜಯ ದಶಮಿಯಿಂದ ಸಂಕ್ರಾಂತಿ ವರೆಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ ಎಂದರು.

ಗೌರಿ ಶಂಕರ ಶಿವ ಶಿವ ಎಂದಿತು. ಭೂಮಿ ನಡುಗಿತು. ಮಳೆ ಬೆಳೆ ತಲ್ಲಣಗೊಂಡಿತು. ಜನರು ಆಪತ್ತುಗೊಂಡಾರು. ನಾನು ಹೇಳಿದಂಗೆ ಭಾರತದಲ್ಲಿ ಒಂದು ಘಟನೆ ಆಗೇ ಆಗುತ್ತದೆ. ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದರು.

ಲೋಕಸಭಾ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಗಳು, ಸತ್ಯಂ ಅಪ್ರಿಯಂ. ಅಸ್ಯತಂ ಪ್ರಿಯ. ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ. ಕಾದು ನೋಡಿ ಏನಾಗುತ್ತದೆ. ಸಮಯ ಬಂದಾಗ ಹೇಳುವೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಒಂದು ಸರ್ಕಾರ ಬರುತ್ತದೆ. ಅದು ಸ್ಥಿರವಾಗಿರುತ್ತದೆ ಎಂದು ಹೇಳಿದ್ದೆ ಅದು ನಿಜವಾಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ. ಅದರಲ್ಲಿ ಅನುಮಾನ ಪಡುವ ಅವಶ್ಯಕತೆ ಇಲ್ಲ. ಜಲಪ್ರಳಯ ಆಗುವ ಲಕ್ಷಣವಿದೆ. ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲ ಸಾವು ನೋವುಗಳು ಆಗುತ್ತವೆ. ಆದರೆ ದೈವ ಕೃಪೆಯಿಂದ ಪಾರಾಗಬಹುದು ಎಂದರು.

Share this Article