ಹುಬ್ಬಳ್ಳಿ: ಬೆಂಗಳೂರು ಹುಬ್ಬಳ್ಳಿ ನಡುವೆ ಸಂಚರಿಸುವ ಜನಶತಾಬ್ದಿ ಸೇರಿದಂತೆ 16 ರೈಲುಗಳ ಸಂಚಾರ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಜೂ.28 ರಿಂದಲೇ ಜಾರಿಗೊಳಿಸಲಾಗಿಲಾಗಿದೆ.
ಹುಬ್ಬಳ್ಳಿ-ಬೆಂಗಳೂರು ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು (ರೈಲು ಗಾಡಿ ಸಂಖ್ಯೆ 12080) ಹುಬ್ಬಳ್ಳಿಯಿಂದ ಮಧ್ಯಾಹ್ನ 1.40 ಬದಲಾಗಿ 2.05ಕ್ಕೆ (25 ನಿಮಿಷ ತಡವಾಗಿ) ಹೊರಡಲಿದೆ. ಉಳಿದಂತೆ ಮಾರ್ಗದ ಎಲ್ಲಾ ನಿಲುಗಡೆಗಳಲ್ಲಿಯೂ 20-30 ನಿಮಿಷ ತಡವಾಗಿ ಆಗಮಿಸಲಿದೆ.
10 ನಿಮಿಷ ತಡವಾಗಿ ಹುಬ್ಬಳ್ಳಿಗೆ
ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ (ರೈಲು ಗಾಡಿ ಸಂಖ್ಯೆ 12079) ಬೆಂಗಳೂರು ನಿಲ್ದಾಣದಿಂದ ಹೊರಡುವ ವೇಳೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಹುಬ್ಬಳ್ಳಿಗೆ ಮಧಾಹ್ನ 1 ಗಂಟೆಯ ಬದಲಾಗಿ 1.10ಕ್ಕೆ ತಲುಪಲಿದೆ.
ವೇಳಾಪಟ್ಟಿ ಬದಲಾವಣೆಯಾದ ಪ್ರಮುಖ ರೈಲುಗಳು:
* ಅರಸಿಕೆರೆ-ಹುಬ್ಬಳ್ಳಿ ರೈಲು ಅರಸಿಕೆರೆಯಿಂದ ಬೆಳಗ್ಗೆ 5.50ಕ್ಕೆ ಹೊರಡುವುದು. ದಾವಣಗೆರೆ-8.48, ರಾಣೆಬೆನ್ನೂರ-9.30, ಹಾವೇರಿ-10.33, ಸವಣೂರು-11.09, ಯಲವಿಗಿ-11.19, ಹುಬ್ಬಳ್ಳಿ-12.35ಕ್ಕೆ ತಲುಪಲಿದೆ.
* ಮಿರಜ್-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ 6.35ಕ್ಕೆ ಹೊರಡುವುದು. ಹುಬ್ಬಳ್ಳಿ-ಯಶವಂತಪುರ ವೀಕ್ಲಿಎಕ್ಸಪ್ರೆಸ್ ಯಶವಂಪುರದಿಂದ ಸಂಜೆ 7.20ಕ್ಕೆ ಹೊರಡಲಿದೆ.
* ರೈಲು ಸಂಖ್ಯೆ 06243 ಕೆಎಸ್ಆರ್ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ ವಿಶೇಷ ರೈಲು ಗುಬ್ಬಿ ನಿಲ್ದಾಣದಿಂದ ನಿಧಾನಗೊಂಡು ಹೊಸಪೇಟೆಯನ್ನು ಮಧಾಹ್ನ 3.45ರ ಬದಲಾಗಿ ಸಂಜೆ 4.25ಕ್ಕೆ ತಲುಪಲಿದೆ.
* ರೈಲು ನಂ. 06245 ಹೊಸಪೇಟೆ – ಹರಿಹರ ಡೆಮು ವಿಶೇಷ ರೈಲು ನಂ.16213 ಅರಸೀಕೆರೆ – ಎಸ್‌ಎಸ್‌ಎಸ್ ಹುಬ್ಬಳ್ಳಿ ಕಾಯ್ದಿರಿಸದ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ. 16580 ಶಿವಮೊಗ್ಗ ಟೌನ್ – ಯಶವಂತಪುರ ಎಕ್ಸ್‌ಪ್ರೆಸ್
ರೈಲು ನಂ.16590 ಮೀರಜ್ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್
* ರೈಲು ಸಂಖ್ಯೆ. 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್
ರೈಲು ಸಂಖ್ಯೆ 16228 ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್
* ರೈಲು ಸಂಖ್ಯೆ. 22697 SSS ಹುಬ್ಬಳ್ಳಿ – ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ. 17312 SSS ಹುಬ್ಬಳ್ಳಿ – ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ. 12778 ಕೊಚುವೇಲಿ – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ. 06579 ಯಶವಂತಪುರ-ತುಮಕೂರು ಕಾಯ್ದಿರಿಸದ ಮೆಮು ಎಕ್ಸ್‌ಪ್ರೆಸ್ ವಿಶೇಷ
* ರೈಲು ಸಂಖ್ಯೆ. 12650 ಹಜರತ್ ನಿಜಾಮುದ್ದೀನ್ – ಯಶವಂತಪುರ ಎಕ್ಸ್‌ಪ್ರೆಸ್
ರೈಲು ಸಂಖ್ಯೆ. 20656 SSS ಹುಬ್ಬಳ್ಳಿ – ಯಶವಂತಪುರ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ. 16225 ಮೈಸೂರು-ಶಿವಮೊಗ್ಗ ಟೌನ್ ಕಾಯ್ದಿರಿಸದ ಎಕ್ಸ್‌ಪ್ರೆಸ್