ಕಾಂಗ್ರೆಸ್ ಗ್ಯಾರಂಟಿಗಳನ್ನು ಜನರ ಮನೆಗಳಿಗೆ ತಲುಪಿಸುತ್ತಿರುವ ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ.

ಸಮಗ್ರ ಪ್ರಭ ಸುದ್ದಿ
1 Min Read

 

ಗಜೇಂದ್ರಗಡ:ಕಾಂಗ್ರೇಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳಾದ ಗೃಹ ಜ್ಯೋತಿ ಯೋಜನೆ,ಗ್ರಹ ಲಕ್ಷ್ಮಿ ಯೋಜನೆ,ಮಹಿಳಾ ಶಕ್ತಿ ಯೋಜನೆಯ ಅರ್ಜಿ ಹಾಕುವದಕ್ಕಾಗಿ ತನ್ನ ಸ್ವಂತ ಹಣದಿಂದ ನೆಟ್ ಸೆಂಟರ್ ಸ್ಥಾಪಿಸಿ. ಉಚಿತವಾಗಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವಂತಹ ಕೆಲಸ ಗಜೇಂದ್ರಗಡದಲ್ಲಿ ನಡೆದಿದೆ.

ಗಜೇಂದ್ರಗಡ ಪುರಸಭೆಯ 13 ನೇ ವಾರ್ಡಿನ ಜನಪ್ರತಿನಿಧಿಯಾದ ಮುರ್ತುಜಾ ಡಾಲಾಯತ ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಪಡೆದುಕೊಳ್ಳಲು ಮಹಿಳೆಯರು ನೆಟ್ ಸೆಂಟರ್, ಕೆ – 1 ಸೆಂಟರ್, ಹೆಸ್ಕಾಂ ಕಚೇರಿ ಸೇರಿದಂತೆ ಹಲವು ಕಡೆ ಸರತಿ ಸಾಲಿನಲ್ಲಿ ನಿಂತು ಮಹಿಳೆಯರು ಪಡುತ್ತಿರುವ ತೊಂದರೆ ನಿಗಿಸಲು ತಾವು ಪ್ರತಿನಿಧಿಸುವ 13 ನೇ ವಾರ್ಡಿನ ಕಲಾಲ ಸಮುದಾಯ ಭವನದಲ್ಲಿ ತಮ್ಮ ಸ್ವಂತ ಹಣದಲ್ಲಿ ನೆಟ್ ಸೆಂಟರ್ ತೆರೆದು ಉಚಿತವಾಗಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಟ್ಟಿದ್ದರಲ್ಲದೆ. ಅರ್ಜಿ ಸಲ್ಲಿಸಲು ಬರುವ ಮಹಿಳೆಯರಿಗೆ ಮದ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೇಸ್ ಹಿರಿಯ ಮುಖಂಡ ಸಿದ್ದಪ್ಪ ಬಂಡಿ ಮಾತನಾಡಿ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ಅನುಭವಿಸುವ ಕಷ್ಟ ಕಾರ್ಪಣ್ಯಗಳ ಅರಿವು ಇರಬೇಕು. ಮುರ್ತುಜ ಡಾಲಯತ ಜನಸಾಮಾನ್ಯರ ನಾಡಿಮಿಡಿತ ಅರಿತವರು ಆದರ್ಶ ಜನಪ್ರತಿನಿದಿಯಾಗಿ ಕೆಲಸಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಪ್ಪು ಮತ್ತಿಕಟ್ಟಿ,ಹೂವಾಜಿ ಚಂದುಕರ ಸೇರಿದಂತೆ ೧೩ ನೇ ವಾರ್ಡಿನ ಮಹಿಳೆಯರು ಇದ್ದರು.

Share this Article