ಗದಗ: ಗದಗ-ಬೆಟಗೇರಿ ನಗರ ಸಭೆಗೆ ಕಛೇರಿಗೆ ಬೀಗ ಹಾಕಿ ಆಡಳಿದ ಪಕ್ಷದ ಬಿಜೆಪಿ ಸದಸ್ಯರು ಅಧಿಕಾರಿಗಳು ಕಾರ್ಯ ವೈಕರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಸಂಜೆ ನಗರ ಸಭೆ ಆವರಣದಲ್ಲಿ ನಡೆದಿದೆ.
ಗದಗ-ಬೆಟಗೇರಿ ನಗರ ಸಭೆಯಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದರು ನಗರ ಸಭೆಯಲ್ಲಿ ಅಧಿಕಾರಿಗಳು ಮಾತ್ರ ಕಾಂಗ್ರೆಸ್ ಸದಸ್ಯರ ಮಾತು ಕೇಳುತ್ತಾರೆ ನಮ್ಮ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡುತಿಲ್ಲ ಜೊತೆಗೆ ಕಾಂಗ್ರೆಸ್ ಸದಸ್ಯರ ವಾರ್ಡುಗಳಿಗೆ ಅತಿ ಹೆಚ್ಚಿನ ಅನುದಾನವನ್ನು ನಗರ ಸಭೆ ಅಧಿಕಾರಿಗಳು ಒದಗಿಸುತ್ತಾರೆ ಎಂದು ಅಧಿಕಾರಿಗಳು ಕಾರ್ಯ ವೈಕರಿಗೆ ಬಿಜೆಪಿ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.