ಗಜೇಂದ್ರಗಡ :ಜೂನ ತಿಂಗಳು ಮುಗಿಯುತ್ತಾ ಬಂದರೂ ಮಳೆ ಬಾರದ ಹಿನ್ನಲೆಯಲ್ಲಿ ರೈತರು ಕಂಗೆಟ್ಟಿದ್ದು ಮಳೆಗಾಗಿ ವಿವಿಧ ವಿಶಿಷ್ಟವಾದ ಆಚರಣೆಗಳನ್ನು ಮಾಡುತ್ತಿದ್ದಾರೆ.
ನಗರದ ಮೈಸೂರು ಮಠದಲ್ಲಿ ಸರ್ವದರ್ಮಿಯರು ಸೇರಿ ವರುಣನ ಕೃಪೆಗಾಗಿ ಗೊಂಬೆಗಳ ಮದುವೆಯನ್ನು ಮಾಡಲಾಯಿತು.
ಗಂಡು ಗೊಂಬೆಗೆ ಹೊಸ ಪಂಚೆ, ಟವೆಲ್, ಬಾಸಿಂಗ್, ಕೊರಳಿಗೆ ಹಾರ,ಹೂವಿನ ಹಾರ ಹಾಕಲಾಗಿತ್ತು. ಹೆಣ್ಣು ಗೊಂಬೆಗೆ ಸೀರೆ, ಕಣ, ಅರಿಶಿಣ ಹಚ್ಚಿ, ಸುರಗಿ ಶಾಸ್ತ್ರವನ್ನು ನೆರವೇರಿಸಿದರು. ಬಳಿಕ ಪುರೋಹಿತ ಶಾಂತಯ್ಯ ಪೂಜಾರ ಮಂತ್ರಾಕ್ಷತೆಗಳೊಂದಿಗೆ ಗೊಂಬೆಗಳಿಗೆ ತಾಳಿ ಕಟ್ಟುವ ಶಾಸ್ತ್ರ ಮಾಡಿದರು.
ಬಳಿಕ ಪುರೋಹಿತ ಶಾಂತಯ್ಯ ಪೂಜಾರ ಮಾತನಾಡಿ ಈಗಾಗಲೇ ಮುಂಗಾರು ಮಳೆಯಾಗಬೇಕಾಗಿತ್ತು ಆದರೆ ವರಣು ದೇವನು ಮುನಿಸಿಕೊಂಡತ್ತೆ ಕಾಣುತ್ತಿದೆ.ಅದಕ್ಕಾಗಿ ಮಳೆಗಾಗಿ ವಿಶೇಷ ಸಂಕಲ್ಪ ಮಾಡಿಕೊಂಡು ಗೊಂಬೆಗಳಿಗೆ ಮದುವೆ ಮಾಡಿದ್ದೇವೆ.ಮಳೆಯಾದರೆ ಎಲ್ಲಾ ರೈತಾಪಿ ವರ್ಗದವರ ಬಾಳು ಹಸನಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸುಲೇಮಾನ ಮೋಮಿನ, ಪರಸಪ್ಪ ಸಂಗಮದ, ಮಹಾಂತೇಶ ಸಂಗಮದ, ಮಹಾದೇವಪ್ಪ ಪವಾರ, ಗುಂಡಪ್ಪ ಪಲ್ಲೇದ, ಬಸವರಾಜ ಹೂಗಾರ, ಪರಪ್ಪ ಬಂಡಿ, ಮಹಾದೇವಪ್ಪ ಯಂಕಚಿ, ಅಶೋಕ ಹೂಗಾರ, ದೇವಪ್ಪ ನರಗುಂದ ಖಾಜಾಸಾಬ ನೀಲೂಗಲ್, ದರೇಸಾಬ ಮೋಮಿನ್ ಸೇರಿದಂತೆ ಅನೇಕರು ಇದ್ದರು.