ವಿದ್ಯುತ್ ದರ ಪರಿಷ್ಕರಣೆ  ಗ್ರಾಹಕರಿಗೆ ಯಾವುದೇ ಆತಂಕ ಬೇಡ: ರಾಜೇಶ ಕಲ್ಯಾಣಶೆಟ್ಟರ್

ಸಮಗ್ರ ಪ್ರಭ ಸುದ್ದಿ
1 Min Read

 

ಗದಗ :  ರಾಜ್ಯ ಸರ್ಕಾರವು ಜನರಿಗೆ ಉಚಿತ ಗ್ಯಾರಂಟಿಗಳಲ್ಲಿ ಒಂದಾಗಿರುವ ಉಚಿತ 200 ಯೂನಿಟ್‍ಗಳವರೆಗೆ ವಿದ್ಯುತ್ ನೀಡುವ ಭರವಸೆಯನ್ನು ಜಾರಿ ಮಾಡಿದೆ. ಆದರೆ ಗ್ರಾಹಕರಿಗೆ ಜೂನ್-2023 ರಲ್ಲಿ ವಿತರಿಸಿದ ಬಿಲ್ಲಿನಲ್ಲಿ ವಿದ್ಯುತ್ ಬಿಲ್ ಕಳೆದ ತಿಂಗಳಿಗಿಂತ ಹೆಚ್ಚಾಗಿ ಬಂದದ್ದನ್ನು ಕಂಡು ಜನರು ಆಕ್ಷೇಪಣೆ ವ್ಯಕ್ತಪಡಿಸಿರುವುದು ಹಾಗೂ ವಿವಿಧ ಮಾಧ್ಯಮಗಳಲ್ಲಿ ಈ ಕುರಿತು ಬಿತ್ತರವಾಗಿರುವುದು ಹೆಸ್ಕಾಂ ಕಛೇರಿಯ ಗಮನಕ್ಕೆ ಬಂದಿದೆ.

ಹೆಸ್ಕಾಂನಿಂದ ಪ್ರತಿ ವರ್ಷದಂತೆ 2023-24 ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, ವಿದ್ಯುತ್ ಶಕ್ತಿ ದರಗಳನ್ನು ಪರಿಷ್ಕರಣೆಗೊಳಿಸಲು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣಾ ಆಯೋಗ ಬೆಂಗಳೂರು ಅವರಿಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಮೇ 12 ರಂದು ವಿದ್ಯುತ್ ಶಕ್ತಿ ನಿಯಂತ್ರಣಾ ಆಯೋಗವು ಎಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್‍ಗೆ ಸರಾಸರಿ 70 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಜಾರಿ ಮಾಡಿದೆ. ಮೇ 2023 ರಲ್ಲಿ ಗ್ರಾಹಕರಿಗೆ ಹಳೆಯ ವಿದ್ಯುತ್ ಶಕ್ತಿ ದರಗಳ ಅನುಗುಣವಾಗಿ ಬಿಲ್ ವಿತರಣೆ ಮಾಡಲಾಗಿದೆ.

ಜೂನ್ 1 ರಿಂದ ಗ್ರಾಹಕರಿಗೆ ಹೊಸ ವಿದ್ಯುತ್ ಶಕ್ತಿ ದರಗಳನುಗುಣವಾಗಿ ಬಿಲ್ ವಿತರಣೆ ಮಾಡಲಾಗಿದೆ. ಜೂನ್ 2023ರಲ್ಲಿ ಜಾರಿ ಮಾಡಿದ ಬಿಲ್ಲಿನಲ್ಲಿ ಮೇ 2023 ರ ಬಿಲ್ಲನ್ನು ಹೊಸ ವಿದ್ಯುತ್‍ಚ್ಛಕ್ತಿ ದರಗಳ ಅನುಗುಣವಾಗಿ ಬಿಲ್ ಪರಿಷ್ಕರಣೆಗೊಳಿಸಿದಾಗ ಬಂದಿರುವ ವ್ಯತ್ಯಾಸದ ಮೊತ್ತವನ್ನು ಮತ್ತು ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆಯ ಮೊತ್ತವನ್ನು ಆಕರಿಸಿ ಬಿಲ್ ವಿತರಣೆ ಮಾಡಲಾಗಿದೆ.

ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಆದೇಶದನ್ವಯ ಗ್ರಾಹಕರಿಗೆ ಜೂನ್ 1 ರಿಂದ ಹೊಸ ವಿದ್ಯುತ್‍ಶಕ್ತಿ ಬಿಲ್ ಜಾರಿ ಮಾಡಲಾಗಿದೆ. ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸಿ ಬಿಲ್ ಪಾವತಿ ಮಾಡಲು ಗದಗ ಹುವಿಸಕಂನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ರಾಜೇಶ ಕಲ್ಯಾಣಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article