ಮಾಂಜಾ ದಾರಾಕ್ಕೆ ಯುವಕ ಬಲಿ

ಸಮಗ್ರ ಪ್ರಭ ಸುದ್ದಿ
1 Min Read

ಗದಗ :ಕಾರ ಹುಣ್ಣಿಮೆಯಂದು ಕಳೆದ ಭಾನುವಾರ ಬೈಕ್ ಮೇಲೆ ಹೋಗುವಾಗ ಡಂಬಳ ನಾಕಾ ಬಳಿ ಚೈನಾ ಮಾಂಜಾ (ಗಾಳಿಪಟದ ದಾರ) ಯುವಕನ ಕತ್ತು ಸೀಳಿತ್ತು ಕಳೆದ ಆರು ದಿನಗಳಿಂದ ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿ ರವಿ ಸಾವನ್ನಪ್ಪಿದ ಯುವಕ ಗದಗ ನಗರದ ಬಾರ್ ನಲ್ಲಿ, ಕೆಲಸ ಮಾಡುತ್ತಿದ್ದ.
ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಾದರೂ ಜಿಲ್ಲಾಡಳಿತ ಎಚ್ಚೆತುಕೊಳ್ಳಲ್ಲಿ:

ಡೇಂಜರ್ ಬೈನಾ ಮಾಂಜಾ ದಾರ ನಿಷೇಧ ಮಾಡಿದರೂ ಸಹಿತ ಅವಳಿ ನಗರದಲ್ಲಿ ಭರ್ಜರಿ‌ ಮಾರಾಟ ಮಾಡುತ್ತಿದ್ದರು ಇದನ್ನು ಸಂಪೂರ್ಣ ನಿಷೇಧ ಮಾಡುವಂತೆ ಕೋರಿ ವಿವಿಧ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು ಸಂಪೂರ್ಣ ಮಾರಾಟ ನಿಷೇಧ ಮಾಡುವಲ್ಲಿ ಅಧಿಕಾರಿಗಳು ವಿಫಲರಾದರು ಇವರ ಈ ನಿಷ್ಕಾಳಜಿಯಿಂದ ಯುವಕ ಪ್ರಾಣ ಕಳೆದುಕೊಂಡ ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮಾಂಜಾದಾರಾ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share this Article