ಗದಗ: ವಿದ್ಯತ್ ಅವಘಡದಿಂದ 2 ಎತ್ತುಗಳು ಸಾವನ್ನಪ್ಪಿ 3 ಎಮ್ಮೆಗಳು ಗಾಯಗೊಂಡು ಬಣವೆ ಭಾಗಶಃ ಸುಟ್ಟಿರೋ ಘಟನೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ. ರಾತ್ರಿ 1 ಘಂಟೆ ಸುಮಾರಿಗೆ ವಿಪರೀತ ಗಾಳಿ ಬೀಸಿದ್ದರಿಂದಾಗಿ ದನದ ಶಡ್ಡಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದರಿಂದ ಘಟನೆ ನಡೆದಿದೆ. ಗ್ರಾಮದ ಯಲ್ಲಪ್ಪ ಪಕ್ಕಪ್ಪ ಬ್ಯಾಳಿ ಇವರಿಗೆ ಸೇರಿದ ಶೆಡ್, ಮೇವಿನ ಬಣವಿ ಇದಾಗಿದ್ದು ಸುಮಾರು 2,50,000 ರೂಪಾಯಿ ಹಾನಿಯಾಗಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.