ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿ ಓರ್ವ ಸಾವು

graochandan1@gmail.com
1 Min Read

ಗದಗ: ನೀರು ತರಲು ಹೊರಟಿದ್ದ ವ್ಯಕ್ತಿ ಕೆಎಸ್ ಆರ್ ಟಿಸಿ ಬಸ್ ಚಕ್ರದಡಿ ಸಿಲುಕಿ ಸಾವನಪ್ಪಿರುವ ಘಟನೆ ಮುಂಡರಗಿ ನಗರದ ಕೆಇಬಿ ಕಚೇರಿ ಕ್ರಾಸ್ ಬಳಿ ನಡೆದಿದೆ.

ಪಟ್ಟಣದ ಮಂಜುನಾಥ್ ಬಂಡಿ (45) ಸಾವನಪ್ಪಿರುವ ವ್ಯಕ್ತಿ ಮುಂಡರಗಿ ಯಿಂದ ಶಿರಹಟ್ಟಿ ಪಟ್ಟಣಕ್ಕೆ ಹೊರಟಿದ್ದ ಬಸ್  ಪಟ್ಟಣದ ಕೆಇಬಿ ಹತ್ತಿರ ಶುದ್ಧ ಕುಡಿಯುವ ನೀರಿನ ತರಲು ಹೊರಟಿದ್ದ ಸಂದರ್ಭದಲ್ಲಿ ಆಯತಪ್ಪಿ ಬಸ್ ಹಿಂಬದಿ ಚಕ್ರದಡಿ ಬಿದ್ದು ಮಂಜುನಾಥ ಸ್ಥಳದಲ್ಲೇ ಸಾವನಪ್ಪಿದ್ದಾನೆ ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದು ನಗರದಲ್ಲಿ ನಡೆದಿರುವ ಎರಡನೇ ಘಟನೆ ಈಗಲಾದರೂ ಪುರಸಭೆ ಮತ್ತು ಕೆಆರ್ ಡಿಸಿಎಲ್ ರಸ್ತೆ ಮಧ್ಯೆ ಡಿವೈಡರ್ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

- Advertisement -
Ad image

Share this Article