ಕರವೇ, ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಅಗಲಿದ ಕನ್ನಡದ ಮಾಣಿಕ್ಯಗೆ ನುಡಿ ನಮನ

ಸಮಗ್ರ ಪ್ರಭ ಸುದ್ದಿ
2 Min Read

ಗಜೇಂದ್ರಗಡ ; ಕನ್ನಡ ಸಾಹಿತ್ಯ ಪರಿಷತ್‌ದಿಂದ ದಿ. ಈಶ್ವರಪ್ಪ ರೇವಡಿ ಹೆಸರಿನಲ್ಲಿ ಸ್ಮಾರಕ ಸಮೂದಾಯ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂ ಗಾಯತ ಸಮಾಜ ಗೌರವಾಧ್ಯಕ್ಷ ಸಿದ್ದಪ್ಪ ಬಂಡಿ ಹೇಳಿದರು.

ಪಟ್ಟಣದ ಮೈಸೂರ ಮಠದಲ್ಲಿ ಗುರುವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ನುಡಿನಮನ ರ‍್ಯಕ್ರಮದಲ್ಲಿ ಅವರು ಮಾತನಾಡಿ, ಆದರ್ಶ ಶಿಕ್ಷಕ ದಿ. ಈಶ್ವರಪ್ಪ ರೇವಡಿ ಹೆಸರು ಅಜರಾಮರವಾಗಿ ಉಳಿಯುವ ಉದ್ದೇಶದಿಂದ ರೋಣ ರಸ್ತೆಯ ಬಳಿಯಲ್ಲಿ ಸಮೂದಾಯ ಭವನ ನಿರ್ಮಾಣಕ್ಕೆ ನಿವೇಶನ ನಿಗದಿ ಪಡಿಸಲಾಗಿದೆ. ಶಾಸಕರಾದ ಜಿ.ಎಸ್. ಪಾಟೀಲರಿಂದ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಸಾನಿಧ್ಯ ವಹಸಿದ್ದ ಜಗದ್ಗುರು ವಿಜಯಮಹಾಂತ ಮಹಾಸ್ವಾಮಿಗಳು ಮಾತನಾಡಿ, ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರ, ಆದಿ ಶಂಕರಚಾರ್ಯರು ಸೇರಿದಂತೆ ಇನ್ನಿತರ ಮಹನೀಯರು ಅಲ್ಪ ಆಯಷ್ಯ ಅವಧಿಯಲ್ಲಿ ದೇಶ ಸುತ್ತಿ ಅದ್ವಿತಿಯ ಸಾಧನೆ ಮೂಲಕ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಕಸಾಪ ನಿಕಟಪೂರ್ವ ಅಧ್ಯಕ್ಷ ದಿ. ಈಶ್ವರಪ್ಪ ರೇವಡಿ ಅವರು ಜೀವಿತಾವಧಿಯಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಸೇವೆ ಜತೆಗೆ ಎಲ್ಲ ಸಮೂದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದಾರು. ಅವರ ವ್ಯಕ್ತಿತ್ವ, ಬದಕು, ಸಮಾಜಸೇವೆ, ಸಾಧನೆಗಳ ಕುರಿತು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕಾಗಿದೆ ಎಂದರು.

ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ, ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಬಿ.ಎಮ್. ಸಜ್ಜನ, ಪ್ರಶಾಂತ ಪಾಟೀಲ, ಕಸಾಪ ಅಧ್ಯಕ್ಷ ಅಮರೇಶ ಗಾಣಿಗೇರ, ಬಿ. ಎಸ್. ಬಸನಗೌಡ್ರ, ರವಿ ಗಡೇದವರ, ಬಸವರಾಜ ಕೊಟಗಿ, ರವೀಂದ್ರ ಹೊನವಾಡ, ಶಿವರಾಜ ಘೋರ್ಪಡೆ, ಶರಣು ಗೋಡಿ, ಮಲ್ಲಿಕಾರ್ಜುನ ಹಡಪದ, ಶರಣು ಪೂಜಾರ, ಎ. ಡಿ. ಕೋಲಕಾರ, ಕರವೇ ಜಿಲ್ಲಾ ಸಂಚಾಲಕ ರಜಾಕ್ ಡಾಲಾಯತ್ ಮಾತನಾಡಿ, ರೋಣ ರಸ್ತೆಯ ರೇವಡಿ ಬಡವಾಣೆಯ ಕನ್ನಡ ಉದ್ಯಾನವನಕ್ಕೆ ಕನ್ನಡಕ್ಕಾಗಿ ದುಡಿದು ಮಡಿದಿರುವ ದಿ. ಈಶಪ್ಪ ರೇವಡಿ ಕನ್ನಡ ಉದ್ಯಾನವನ ಎಂದು ನಾಮಕರಣ ಮಾಡಿ, ಅಲ್ಲಿ ಕನ್ನಡ ಸಂಸ್ಕೃತಿ, ಪರಂಪರೆ ಬಿಂಬಿತವಾಗುವಂತೆ ಅಭಿವೃದ್ಧಿ ಪಡಿಸಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಮೈಸೂರಮಠದಲ್ಲಿ ಗುರುವಾರ ಸಂಜೆ ಕರವೇ, ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ ನುಡಿ ನಮನ ರ‍್ಯಕ್ರಮದಲ್ಲಿ ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ಮಾತನಾಡಿದರು. 

ಸಮಾಜಗಳ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಚಂಬಣ್ಣಾ ಚವಡಿ, ಪ್ರಭು ಚವಡಿ, ಶರಣಪ್ಪ ರೇವಡಿ, ಸಿದ್ದಪ್ಪ ಬಂಡಿ, ವಿ. ಎ. ಹಾದಿಮನಿ, ಹನಮಂತ ಅಜ್ಜಗೇರಿ, ರಾಜು ಸಾಂಗ್ಲಿಕರ. ಪ್ರಶಾಂತ ರಾಠೋಡ, ಎ. ಕೆ. ವಂಟಿ, ಶೆಶಿಧರ ಹೂಗಾರ, ವೀರೇಶ ಸಂಗಮದ, ರವಿ ಗುಗಲೋತ್ತರ, ಅಶೋಕ ಜಗಳೂರ ದಿ. ಈಶ್ವರಪ್ಪ ರೇವಡಿ ಕುಟುಂಬಸ್ಥರು, ಅಭಿಮಾನಿಗಳು ಕರವೇ ರ‍್ಯಕರ್ತರಿದ್ದರು. ಕಾರ್ಯಕರ್ತರಿದ್ದರು.

Share this Article