ವೀರ ಸಾವರ್ಕರ್ ಜಯಂತಿ ಅಂಗವಾಗಿ ರೋಖಡೆ ಕುಟುಂಬದ ಮನೆ ಆವರಣದಲ್ಲಿ ಸಾವರ್ಕರ ರ್ಪುತ್ಥಳಿ ಅನಾವರಣ 

ಸಮಗ್ರ ಪ್ರಭ ಸುದ್ದಿ
3 Min Read
ಓಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಹಿಂಭಾಗದ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಮಹೇಶ ರೋಖಡೆಯವರು ಮನೆಯ ಆವರಣದಲ್ಲಿ ಸಾವರ್ಕರ್ ಜಯಂತ್ಯುತ್ಸವ ನಿಮಿತ್ತ ವೀರ ಸಾವರ್ಕರ್ ಪುತ್ಥಳಿ ಅನಾವರಣ.

ಅಂದು ಸ್ವಾತಂತ್ರಕ್ಕಾಗಿ ಸಾವರ್ಕರ್ ಇಂದು ಸ್ವಾತಂತ್ರ್ಯ ಉಳಿವಿಗಾಗಿ ನಾವು ನೀವು : ಪ್ರಮೋದ ಮುತಾಲಿಕ್

ಗದಗ : ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಹಿಂಭಾಗದ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷರಾದ ಮಹೇಶ ರೋಖಡೆಯವರು ಮನೆಯ ಆವರಣದಲ್ಲಿ ಸಾವರ್ಕರ್ ಜಯಂತ್ಯುತ್ಸವ ನಿಮಿತ್ತ ವೀರ ಸಾವರ್ಕರ್ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಭಾಗಿಯಾಗಿ ಪುತ್ಥಳಿ ಅನಾವರಣಗೊಳ್ಳಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ ಮುತಾಲಿಕ್ ಮೊದಲು ಕಾಂಗ್ರೆಸ್ ಚಿನ್ಹೆ ಜೋಡೆತ್ತು ಇತ್ತು ಹಳ್ಳಿ-ಹಳ್ಳಿಗಳಲ್ಲಿ ಜೋಡೆತ್ತುಗಳ ಪ್ರಭಾವ ಗೊತ್ತಿತ್ತು ಜೋಡು ಎತ್ತುಗಳ ಲಾಭ ತಗೆದುಕೊಂಡ್ರಲಾ ಆವಾಗ ನೆನಪ್ಪು ಆಗಲಿಲ್ವಾ ಗೋ-ಮಾತೆದು. ಆದ್ರೆ ಈವಾಗ ಹೇಳುತ್ತಿದ್ದಾರೆ ಗೋ-ಹತ್ಯೆ ವಾಪಾಸ್ ಪಡೆಯುತ್ತೇವೆ ಅಂತಾ. ಮುಸ್ಲಿಂ ರ ವೋಟ್ ಗೋಸ್ಕರ ಗೋ-ಹತ್ಯೆ ನಿಷೇಧ ಹಿಂಪಡೆಯುತ್ತೇವೆ ಅಂತಾ ಹೇಳತ್ತಾರೆ. ಮೊದಲ ಬಾರಿಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಿದ್ದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಕಾನೂನು ರಚನೆ ಮಾಡಿದ್ರು ಕಾಂಗ್ರೆಸ್ ಸರ್ಕಾರ ಅದನ್ನು ಮರೆತು ಬಿಟ್ರಾ, ಆಜಾನ್ ಮೈಕ್ ನಿಂದ ಜನ್ರಿಗೆ ತೊಂದರೆ ಆಗುತ್ತೇ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ ಪ್ರಾರ್ಥನೆಗೆ ವಿರೋಧವಿಲ್ಲಾ ಮೈಕ್ ಶಬ್ದದ ಪರಿಣಾಮ ದಿಂದ ಎಷ್ಟು ಅನಾಹುತ ಆಗುತ್ತಿದೆ ಅದಕ್ಕೆ ವಿರೋಧವಿದೆ ಎಂದರು ವಿಚಿತ್ರವಾದ ಕಾಂಗ್ರೆಸ್ ನ ಮನಸ್ಥಿತಿದೆ ಈವಾಗಿಂದ ಅಲ್ಲಾ ಗಾಂಧಿಜಿ ನೇತೃತ್ವದಲ್ಲಿ ವಹಿಸಿದ್ದಾಗಿನಿಂದ ಇಲ್ಲಿವರಿಗೆ ಮುಂದುವರಿಯುತ್ತಿದೆ ಇದು ದೇಶಕ್ಕೆ ಅಪಾಯಕಾರಿ ನೆನಪು ಇಟ್ಟಿಕೊಳ್ಳಿ ಇದನ್ನು ಬದಲಾವಣೆ, ಪರಿವರ್ತನೆ ಮಾಡಬೇಕು.. ಮನೆ ಮನೆಗೆ ತರೆಳಿ ಹೇಳಬೇಕಿದೆ ನೀವು ಕಾಂಗ್ರೆಸ್ ತಂದಿಲ್ಲಾ ದೇಶ ವಿರೋಧಿ ಶಕ್ತಿಯನ್ನ ಕಾಂಗ್ರೆಸ್ ಸರ್ಕಾರವನ್ನ ತಂದಿದ್ದಿರೀ ಎಂದು ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ನಾನು ಕೊಡ ಸಾವರ್ಕರ್ ವಿಚಾರಕ್ಕೆ ಮನಸೋತು ನನ್ನ ಇಡೀ ಜೀವನವನ್ನು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೀಸಲು ಇಟ್ಟಿದ್ದೇನೆ. ಅಂದು ಸ್ವಾತಂತ್ರಕ್ಕಾಗಿ ಸಾವರ್ಕರ್ ಹೋರಾಟ ಮಾಡಿದರು ಇಂದು ನಾವು ನೀವು ಸೇರಿ ಸ್ವಾಂತಂತ್ರ್ಯದ ಉಳಿವಿಗಾಗಿ ಹೋರಾಟ ಮಾಡುವ ಸಂಬಂಧ ಬಂದೊದಗಿದೆ ಹಾಗೂ ಮತ್ತು ರಾಜ್ಯದಲ್ಲೇ ಮೊದಲ ಬಾರಿಗೆ ವೀರ ಸಾವರ್ಕರ್ ಪುತ್ಥಳಿ ಅನಾವರಣಗೊಳ್ಳಸಿದು ವೈಶಿಷ್ಟಪೂರ್ಣವಗಿದ್ದು ದೇಶ ಪ್ರೇಮಕ್ಕೆ ಪ್ರೇರಣಾ ದಾಯಕವಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ತುಂಬಾ ಖುಷಿ ತಂದಿದೆ ಆ ಕಾರಣಕ್ಕಾಗಿ ರೋಖಡೆ ಕುಟುಂಬಸ್ಥರು ಅಭಿನಂದಿಸಿ ಸಾವರ್ಕರರನ್ನು ಮನೆ ಮನೆ ತಲುಪಿಸಿ ಮತ್ತೆ ಭವ್ಯ ಭಾರತದ ನಿರ್ಮಾಣ ಕೈಜೋಡಿಸಬೇಕಾಗಿ ಎಂದು ಮಾತನಾಡಿದರು. ಇಂದೇ ಸಂದರ್ಭದಲ್ಲಿ ವಿಶ್ವನಾಥ ರೋಖಡೆ ಮತ್ತು ಮಹೇಶ ರೋಖಡೆಯವರಿಗೆ ಕುಟುಂಬಸ್ಥರಿ ಪರವಾಗಿ ಆತ್ಮೀಯವಾಗಿ ಪ್ರಮೋದ್ ಮುತಾಲಿಕ್ ಸನ್ಮಾನಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದಸಿದ ಜಗದ್ಗರು ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಭಾರತಿ ಮಹಾಸ್ವಾಮಿಗಳು ಮಹೇಶ ರೋಖಡೆಯವರು ಮನೆಯ ಆವರಣದಲ್ಲಿ ಸಾವರ್ಕರ್ ಪುತ್ಥಳಿ ಅನಾವರಣಗೊಳ್ಳಸಿದಂತೆ ಪ್ರತಿ ಮನೆ ಮತ್ತು ಮನದಲ್ಲಿ ಸಾವರ್ಕರ್ ಸ್ಥಾಪಿಸಿ ದೇಶದ ಶ್ರೇಯೋಭಿವೃದ್ಧಿಗಾಗಿ ಸರ್ವರೂ ತಮ್ಮ ತಮ್ಮ ಕೈಲಾದ ಕೆಲಸವನ್ನು ಮಾಡಬೇಕು ನವಯುವಕರು ದೇಶದಲ್ಲಿ ಸಾವರ್ಕರ್ ಹೆಸರನ್ನು ಪಸರಿಸಿ ಪ್ರೇರಣೆ ಪಡೆಯಬೇಕೆಂದು ದೇಶ-ಧರ್ಮದ ಉಳಿವಿಗಾಗಿ ಪಣತೊಡಬೇಕು ಈ ಕಾರ್ಯಗಳಿಗೆ ಭಗವಂತ ತಮ್ಮೆಲ್ಲರಿಗೂ ಶಕ್ತಿ ನೀಡಲಿ ಎಂದು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀರಾಮ ಸೇನಾ ಧಾರವಾಡ ವಿಭಾಗ ಸಂಚಾಲಕರಾ ಶ್ರೀ ರಾಜು ಖಾನಪ್ಪನವರ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ಧು ಜೀವನಗೌಡ್ರ, ಮಾಜಿ ನಗರಸಭಾ ಸದಸ್ಯರು ಮತ್ತು ವಕೀಲರಾದ ಎಮ್. ಎಮ್. ಹಿರೇಮಠ, ಅತಿಥಿಗಳಾಗಿ ವಿಧ್ಯಾನಿಧಿ ಪ್ರಕಾಶನದ ಪ್ರಕಾಶಕರಾದ ಜಯದೇವ ಮೆಣಸಗಿ, ಮರಾಠಾ ಸಮಾಜದ ಹಿರಿಯರು ವಿರುಪಾಕ್ಷಪ್ಪ ಹೆಬ್ಬಳ್ಳಿ, ಗಣ್ಯ ವ್ಯಾಪಾರಸ್ಥರಾದ ಮಲ್ಲಿಕಾರ್ಜುನ ಚಿಂಚಲಿ, ಚಿನ್ನ-ಬೆಳ್ಳಿ ಆಭರಣ ತಯಾರಕರ ಸಂಘದ ಅಧ್ಯಕ್ಷರಾದ ಜಗದೀಶ ಹುಬ್ಬಳ್ಳಿ, ಸ್ವಕುಳಿಸಾಳಿ ಸಮಾಜದ ಅಧ್ಯಕ್ಷರಾದ ವಿಠ್ಠಲ ಸಫಾರೆ, ಗಣ್ಯ ವ್ಯಾಪಾರಸ್ಥರಾದ ಮಂಜುನಾಥ ಬೇಲೇರಿ, ರಾಜು ಮುಧೋಳ, ಅರುಣ ದೈವಜ್ಞ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು, ವೀರ ಸಾವರ್ಕರ್ ಅಭಿಮಾನಿಗಳು ಮತ್ತು ಸಾರ್ವಜನಿಕ ಭಾಗವಹಿಸಿದರು ಶ್ರೀರಾಮ ಸೇನಾ ಮುಖಂಡರಾದ ಬಸವರಾಜ ಕುರ್ತಕೋಟಿ ಸ್ವಾಗತಿಸಿದರು, ಈಶ್ವರ ಕಾಟವಾ ವಂದಿಸಿದರು, ಗಣೇಶ ಸತ್ಯಪ್ಪನವರ ನಿರೂಪಿಸಿದರು.

Share this Article