ಜೂನ್ ೧ ರಂದು ಗ್ಯಾರಂಟಿ ಘೋಷಣೆ ಕುರಿತು ಕ್ರಾಂತಿಕಾರಕ ನಿರ್ಣಯ :ಸಚಿವ ಎಚ್ಕೆ ಪಾಟೀಲ 

ಸಮಗ್ರ ಪ್ರಭ ಸುದ್ದಿ
1 Min Read

ಗದಗ:  ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಗಳ ಈಡೇರಿಕೆ ವಿಚಾರವಾಗಿ ಜೂನ್ ಒಂದನೇ ತಾರೀಖಿಗೆ ಗ್ಯಾರಂಟಿ ಕಾರ್ಡ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡುತ್ತೇವೆ ಗ್ಯಾರಂಟಿ ಕಾರ್ಡ ವಿಚಾರದಲ್ಲಿ ಗೊಂದಲ ಅಂತ ಭಾವಿಸಿಕೊಳ್ಳುವರು ಕೆಲವರು ಇದ್ದಾರೆ ಅಂಥವರಿಗೆ ನಾನು‌ ಏನನ್ನೂ‌ ಹೇಳಲು ಬಯಸೋದಿಲ್ಲ ಒಂದನೆ ತಾರೀಖನಂದು ನಮ್ಮ ಕ್ಯಾಬಿನೆಟ್ ಸಭೆ ನಡೆಯುತ್ತೆ ಆ‌ ಸಭೆಯಲ್ಲಿ ವಿವರವಾದ ಕ್ರಾಂತಿಕಾರಕ, ದೊಡ್ಡ ನಿರ್ಣಯವನ್ನ ಕೈಗೊಳ್ಳಲಿದ್ದೇವೆ ಎಂದು ನಗರದಲ್ಲಿ ಸಚಿವ ಎಚ್ಕೆ ಪಾಟೀಲ ಹೇಳಿದರು.

ಜನರ ಆಶಿರ್ವಾದಕ್ಕಾಗಿ ಕೈ ಮುಗಿದು ಕೃತಜ್ಞತೆ: 

ಸಚಿವರಾಗಿ ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಹೆಚ್.ಕೆ.ಪಾಟೀಲ್ ಮಾಧ್ಯಮದವರೊಂದಿಗೆ ಮಾತನಾಡಿ
ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ನನ್ನ ಮಹಾಜನತೆ ಭೇಟಿ‌ ಆಗಲು ಬಂದಿದ್ದೇನೆ. ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಜನರ ಉಪಕಾರ ಸ್ಮರಣೆ ಮಾಡಲು ಬಂದಿದ್ದೇನೆ. ನನ್ನ ಕ್ಷೇತ್ರದ ಜನರ ಆಶಿರ್ವಾದಕ್ಕಾಗಿ ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಖಾತೆ ಬಗ್ಗೆ ನನಗೆ ಪೂರ್ಣ ಸಮಾಧಾನವಿದೆ: 

ಸಚಿವ ಸ್ಥಾನದ ಖಾತೆ ವಿಚಾರವಾಗಿ ಮಾತನಾಡಿದ ಅವರು ನನ್ನ ದೊರಕಿರುವ ಖಾತೆ ಬಗ್ಗೆ ನನಗೆ ಪೂರ್ಣ ಸಮಾಧಾನವಿದೆ
ಖಾತೆಗಳ ಬಗ್ಗೆ ಗೊತ್ತಿಲ್ಲದವರು ಏನಾದರೂ ವ್ಯಾಖ್ಯಾನ ಮಾಡಬಹುದುಈಗಾಗಲೇ ಈ ಖಾತೆಯನ್ನ ಒಮ್ಮೆ ನಿರ್ವಹಿಸಿದ್ದೇನೆ ಆ‌ ಸಮಯದಲ್ಲಿ ಉತ್ತರ ಕರ್ನಾಟಕಕ್ಕೆ ಕಾನೂನು‌ ವಿಶ್ವವಿದ್ಯಾಲಯ ತರುವ ದೊಡ್ಡ ಪ್ರಯತ್ನವಾಗಿತ್ತು
ನಾನು ಆ‌ ಖಾತೆಯಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ ಸರ್ಕ್ಯೂಟ್ ಬೆಂಚ್ ಮಾಡುವುದರಲ್ಲಿ ಜನಕ್ಕೆ ಗೊತ್ತಿದೆ ಜೊತೆಗೆ ಸಂಸದೀಯ ವ್ಯವಹಾರಗಳ‌ ಮತ್ತು ಪ್ರವಾಸೋದ್ಯಮ ಖಾತೆಯನ್ನೂ‌ ಸಹ ಕೊಟ್ಟಿದ್ದಾರೆ ಈ‌ ಖಾತೆಗಳನ್ನ ನಿರ್ವಹಿಸಲಿಕ್ಕೆ ನನಗೆ ಸಂತೋಷ ಅಭಿಮಾನ ಅನ್ನಿಸುತ್ತದೆ ಈ ಖಾತೆಗಳ ಮೂಲಕ ಬಾಕಿ ಉಳಿದ ಹಲವಾರು ಯೋಜನೆಗಳನ್ನ ಪೂರ್ಣಗೊಳಿಸಲು ಪ್ರಯತ್ನಿಸುವೆ ಎಂದು ಹೇಳಿದರು.

Share this Article