ಬಿಂಕದಕಟ್ಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮಧ್ಯೆ ಕಂಬಕ್ಕೆ ಕಾರ ಡಿಕ್ಕಿ:ಓರ್ವ ಗಂಭೀರ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಡಿವೈಡರ್ ಮಧ್ಯದ ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಓರ್ವನ ಸ್ಥಿತಿ ಚಿಂತಾಜನಿಕವಾಗಿದ್ದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಹುಬ್ಬಳ್ಳಿಯಿಂದ ಗಂಗಾವತಿ ಕಡೆ ತೆರಳುತ್ತಿದ್ದ ಕಾರು ಅತೀಯಾದ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ  ಡಿವೈಡರಗೆ ಡಿಕ್ಕಿ ಹೊಡೆದಿದೆ ಕೆಎ51 ಎಸಿ 3253 ನಂಬರ್ ನ ಮಾರುತಿ ಸುಜುಕಿ ಕಾರು ಅಪಘಾತ ವಾಗಿದೆ  ಇದೆ ಕಾರನಲ್ಲಿ ಒಟ್ಟು  ಮೂವರು ಪ್ರಯಾಣಿಸುತ್ತುದ್ದರು ಮೂವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದವರು ಎನ್ನಲಾಗುತ್ತಿದೆ.

ಮೂವರ ಪೈಕಿ ಓರ್ವನ ಸ್ಥಿತಿ ಚಿಂತಾಜನಿಕವಾಗಿದ್ದು ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮೂವರನ್ನು
ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Article