ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆಗೆ ದೆಹಲಿಯ ಕಾಂಗ್ರೆಸ್ ವಾರ್ ರೂಮ್ನಲ್ಲಿ ಭಾರೀ ಕಸರತ್ತು ನಡೆದಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮತದ ನಿರ್ಧಾರ ಬಾರದ ಹಿನ್ನೆಲೆ ಸಚಿವ ಸಂಪುಟ ರಚನೆ ಹೈಕಮಾಂಡ್ಗೆ ತಲೆನೋವಾಗಿ 11:45 ಕ್ಕೆ ನಡೆಯಲಿದೆ ಎನ್ನಲೀಗುತ್ತಿದ್ದು. ಸದ್ಯ, ನೂತನ ಸಚಿವರ ಪ್ರಮಾಣವಚನ ಮೇ 28ರಂದು ನಡೆಯಲಿದ್ದು, ಸಚಿವರ ಪಟ್ಟಿಯೂ ಅಂತಿಮಗೊಂಡಿದೆ. ಅಧೃಕೃತ ಘೋಷಣೆಯೊಂದೇ ಬಾಕಿ ಇದೆ. ಈ ನಡುವೆ ನೂತನ ಸಚಿವರ ಪಟ್ಟಿ ಸಮಗ್ರ ಪ್ರಭ ಗೆ ಲಭ್ಯವಾಗಿದೆ. ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಇನ್ನು ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ.
ನೂತನ ಸಚಿವರ ಸಂಭವನೀಯ ಪಟ್ಟಿ:
ಹೆಚ್.ಕೆ.ಪಾಟೀಲ್, ಮಂಕಾಳ ವೈದ್ಯ, ಶಿವಾನಂದ ಪಾಟೀಲ್, ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ಡಾ.ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ಕೆ.ವೆಂಕಟೇಶ್, ಮಧು ಬಂಗಾರಪ್ಪ, ಸಂತೋಷ್ ಲಾಡ್, ವಿನಯ್ ಕುಲಕರ್ಣಿ, ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ. ಇನ್ನು, ವಿಧಾನಸಭೆ ಉಪಸಭಾಪತಿ ಸ್ಥಾನ ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.