ಗಜೇಂದ್ರಗಡ/ರೋಣ: ಜನರೊಂದಿಗೆ ಬೆರೆತು ನೊಂದವರ ಧ್ವನಿ ಯಾಗಿ ಮತದಾರ ಋಣ ತೀರಿಸುವ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ರೋಣ ಕ್ಷೇತ್ರ ಮತದಾನ ಫಲಿತಾಂಶ ಪ್ರಕಟ ಬಳಿಕ ಶನಿವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ಅವರು ತೆರೆದ ವಾಹನದಲ್ಲಿ ಬಹಿರಂಗ ಮೆರವಣಿಗೆ ನಡೆಸಿ, ಕಾರ್ಯಕರ್ತ ರಿಂದ ಸನ್ಮಾನಿತರಾಗಿ ಮಾತನಾಡಿದರು.
ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದಕ್ಕೆ ಕ್ಷೇತ್ರದ ಮತದಾರರಿಗೆ ನಾನು ಎಂದೆಂದಿಗೂ ಋಣಿಯಾಗಿರುವ, ಕಾಂಗ್ರೆಸ್ ಪಕ್ಷವನ್ನು ಮತ್ತು ನನ್ನನ್ನು ಬೆಂಬಲಿಸಿದ ಕ್ಷೇತ್ರದ ಜನತೆಗೆ ಧನ್ಯವಾದಗಳು, ಮತಯಾಚನೆಗಾಗಿ ಮನೆ ಬಾಗಿಲಿಗೆ ಬಂದಾಗ ಮನೆ ಮಗನಂತೆ ಬರಮಾಡಿಕೊಂಡು, ಸನ್ಮಾನಿಸಿ ತೋರಿದ ಪ್ರೀತಿಗೆ ನಾನು ಸದಾ ಚಿರಋಣಿ.ಗಜೇಂದ್ರಗಡ ಕ್ಷೇತ್ರ ಎಂದೆಂದಿಗೂ ನನ್ನ ಕರ್ಮ ಭೂಮಿ, ಎಂದಿನಂತೆ ನಿಮ್ಮೊಂದಿಗಿದ್ದು ನನ್ನ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುವ ಮೂಲಕ ನೊಂದವರ ಧ್ವನಿಯಾಗುತ್ತೇನೆ ಎಂದರು.
ತೆರದ ವಾಹನದಲ್ಲಿ ಶಾಸಕ ಜಿ.ಎಸ್.ಪಾಟೀಲ, ಮೂಲಕ ಆಚರಿಸಿದರು. ಸಿದ್ದಪ್ಪ ಬಂಡಿ ಇನ್ನಿತರ ನಾಯಕರ ಮೆರವಣಿಗೆ ನಡೆಯಿತು.
ಕುಣಿದು ಕುಪ್ಪಳಿಸಿದ ಮಹಿಳೆಯರು:
ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ್ ಗೆಲುವಿನ ಹಿನ್ನೆಲೆಯಲ್ಲಿ ರೋಣ ಕ್ಷೇತ್ರಾ ದ್ಯಂತ ಅಭಿಮಾನಿಗಳು, ಕಾರ್ಯಕರ್ತರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆ ಯಲ್ಲಿ ಹರ್ಷ ವ್ಯಕ್ತಪಡಿಸಿದರು. ಒಂದೆಡೆ ಯುವಕರು, ಕಾರ್ಯಕರ್ತರು: ಹರ್ಷ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಮಹಿಳಾ ಕಾರ್ಯಕರ್ತರು ಜಿ.ಎಸ್.ಪಾಟೀಲ್ ಅವರ ಗೆಲುವನ್ನು ಕುಣಿದು ಕುಪ್ಪಳಿಸುವ ಹರ್ಷವನ್ನು ವ್ಯಕ್ತ ಪಡಿಸಿದರು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ:
ನಗರದಲ್ಲಿದೆ ತುಂಬೆಲ್ಲ ಪಟಾಕಿಗಳ ಸದ್ದು ಮಾಡುತ್ತಿತ್ತು. ಮತ್ತೊಂದೆಡೆ ಕಾಂಗ್ರೆಸ್ ನಾಯಕ ಸಿದ್ದಣ್ಣ ಬಂಡಿ ಅವರ ಪತ್ನಿ ವಿದ್ಯಾ ಬಂಡಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಸಿದ್ದಣ್ಣಾ ಬಂಡಿ, ಮಂಜುಳಾ ರೇವಡಿ, ಮಿಥುನ್ ಪಾಟೀಲ, ಡಾ.ಪ್ರಶಾಂತ ಪಾಟೀಲ,ಶಿವರಾಜ ಘೋರ್ಪಡೆ ಮುತ್ತಣ್ಣಾ ಮ್ಯಾಗೇರಿ, ವಿಶ್ವನಾಥ ಜಿಡ್ಡಿಬಾಗಿಲ, ಚಂಬಣ್ಣಾ ಚವಡಿ, ಸೋಂಪುರ, ಐ.ಎಸ್.ಪಾಟೀಲ, ಪ್ರಭು ಚವಡಿ, ಶಶಿಧರ ಹೂಗಾರ, ಬಸವರಾಜ ಹೂಗಾರ ಇನ್ನಿತರಿದ್ದರು. ಸಹಸ್ರಾರು ಕಾವ್ಯಕರ್ತರು, ಮಹಿಳೆಯರಿದ್ದರು ಮಾಡಿದರು.