ಅಭೂತಪೂರ್ವ ಗೆಲುವು ಸಾಧಿಸಿದ ಜಿ.ಎಸ್.ಪಾಟೀಲ: ಮುಗಿಲು ಮುಟ್ಟಿದ ಸಂಭ್ರಮ.

ಸಮಗ್ರ ಪ್ರಭ ಸುದ್ದಿ
1 Min Read

ಗಜೇಂದ್ರಗಡ:ಗದಗ ಜಿಲ್ಲೆಯಲ್ಲಿ ಅತ್ಯಂತ ದೊಡ್ಡದಾದ ವಿಧಾನಸಭಾ ಕ್ಷೇತ್ರ ರೋಣ ಮತಕ್ಷೇತ್ರ ಈ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್ 54,545 ಮತಗಳಿಂದ ಭರ್ಜರಿ ಜಯವನ್ನು ಗಳಿಸಿದ್ದಾರೆ.

ಹಾಲಿ ಶಾಸಕ ಕಳಕಪ್ಪ ಬಂಡಿ,ಆಪ್ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ, ಜೆಡಿಎಸ್ ಅಭ್ಯರ್ಥಿ ಮಕ್ತುಂಸಾಬ ಮುಧೋಳ, ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್ ನಡುವೆ ನೇರ ನೇರ ಹಣಾಹಣೆ ನಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಜೆ ಎಸ್ ಪಾಟೀಲ್ ಜಯಭೇರಿ ಬಾರಿಸಿದ್ದಾರೆ.

ಮುಗಿಲು ಮುಟ್ಟಿದ ಸಂಭ್ರಮ: 

ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್ ಗೆಲುವಿನ ಹಿನ್ನೆಲೆಯಲ್ಲಿ ರೋಣ ಮತಕ್ಷೇತ್ರಾದ್ಯಂತ ಅಭಿಮಾನಿಗಳು ಕಾರ್ಯಕರ್ತರು ಮಹಿಳೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.

ಕುಣಿದು ಕುಪ್ಪಳಿಸಿದ ಮಹಿಳಾ ಕಾರ್ಯಕರ್ತರು;

ಒಂದೆಡೆ ಯುವಕರು, ಕಾರ್ಯಕರ್ತರು ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಮಹಿಳಾ ಕಾರ್ಯಕರ್ತರು ಜಿ ಎಸ್ ಪಾಟೀಲ್ ಅವರ ಗೆಲುವನ್ನು ಕುಣಿದು ಕುಪ್ಪಳಿಸುವ ಮೂಲಕ ಆಚರಣೆ ಮಾಡಿದರು.

ಪಟಾಕಿ ಸಿಡಿಸಿ ಸಂಭ್ರಮಾಚರಣೆ:
ನಗರದಲ್ಲಿದೆ ತುಂಬೆಲ್ಲ ಪಟಾಕಿಗಳ ಸದ್ದು ಮಾಡುತ್ತಿತ್ತು ಮತ್ತೊಂದೆ ಕಾಂಗ್ರೆಸ್ ಪ್ರಬಲ ನಾಯಕ ಸಿದ್ದಣ್ಣ ಬಂಡಿ ಅವರ ಧರ್ಮಪತ್ನಿ ವಿದ್ಯಾ ಬಂಡಿ ಪಟಾಕಿ ಸೇರಿಸಿ ಸಂಭ್ರಮಾಚರಣೆಯನ್ನು ಮಾಡಿದ್ದು ವಿಶೇಷ.

ಒಟ್ಟಿನಲ್ಲಿ ಸರ್ವ ಜನಾಂಗದ ನಾಯಕ ಎನಿಸಿಕೊಂಡಿರುವ ಜಿ.ಎಸ್ ಪಾಟೀಲರ ಗೆಲುವಿನೊಂದಿಗೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು ಮುಂದಿನ ದಿನಗಳಲ್ಲಿ ಇದೆ ಹರ್ಷ ಇರುತ್ತಾ ಎನ್ನುವುದನ್ನು ಕಾದು ನೋಡೋಣ.

Share this Article