ಗದಗ ಜಿಲ್ಲೆಗೆ ಶೇ.85.69% ರಷ್ಟು ಎಸ್ ಎಸ್ ಎಲ್ ಸಿ ಫಲಿತಾಂಶ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಕಳೆದ ಮಾರ್ಚ ಹಾಗೂ ಎಪ್ರೀಲ ತಿಂಗಳಲ್ಲಿ ನಡೆದ ಎಸ್ ಎಸ್ ಎಲ್ ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಈ ಬಾರಿ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ.

ಜಿಲ್ಲಾಧ್ಯಂತ ಒಟ್ಟು 44 ಶಾಲೆಗಳು 100% ಫಲಿತಾಂಶ ದೊರಕಿವೆ 04 ಶಾಲೆಗಳು 40% ಕಡಿಮೆ ಫಲಿತಾಂಶ 01 ಶಾಲೆ ಶೂನ್ಯ ಫಲಿತಾಂಶ ಬಂದಿದ್ದು ಒಟ್ಟಾರೆಯಾಗಿ 2022-23 ನೇ ಸಾಲಿನಲ್ಲಿ 85.69% ಶೇಕಡಾವಾರು ಸಾಧಿಸಿ ರಾಜ್ಯದ ಪಟ್ಟಿಯಲ್ಲಿ 25 ನೇ ಸ್ಥಾನ ಪಡೆದುಕೊಂಡಿದೆ.

ತಾಲೂಕು ವಾರು ಫಲಿತಾಂಶಗಳ ವಿವರ:

14781 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅದರಲ್ಲಿ ಈ ಬಾರಿ 12666 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಈ ಪೈಕಿ ಗದಗ ಗ್ರಾಮೀಣ ಪ್ರದೇಶಗಳಲ್ಲಿ 86.29% ಗದಗ ನಗರದಲ್ಲಿ 82.52% ನರಗುಂದ ತಾಲೂಕಿನಲ್ಲಿ 86.04%ರೋಣ ತಾಲೂಕಿನಲ್ಲಿ 85.32% ಶಿರಹಟ್ಟಿ ತಾಲೂಕಿನಲ್ಲಿ 89.59% ಮುಂಡರಗಿ ತಾಲೂಕಿನಲ್ಲಿ 83.82% ಗಳಿಸಿದ್ದಾರೆ.

ಜಿಲ್ಲಾವಾರು ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ:

  • ಜಿಲ್ಲೆಗೆ ಪ್ರಥಮ ಸ್ಥಾನವನ್ನು ಸರ್ಕಾರಿ ಪ್ರೌಢ ಶಾಲೆ ಬಟ್ಟೂರಿನ ವಿದ್ಯಾರ್ಥಿನಿ ಕು.ಲಕ್ಷ್ಮಿ ಜಿಗಳೂರ ಇವಳು 619 ಅಂಕಗಳನ್ನು ಪಡೆದಿದ್ದಾಳೆ.
    ಮೊರಾರ್ಜಿ ವಸತಿ ದೇಸಾಯಿ ಶಾಲೆ ಗೊಜನೂರಿನ ವಿದ್ಯಾರ್ಥಿನಿ ಕು.ಸೌಮ್ಯ ಸೊರಟೂರ ಇವಳು ಕೂಡಾ 619 ಅಂಕ ಪಡೆದಿದ್ದಾಳೆ.
  • ಇನ್ನೂ ದ್ವೀತಿಯ ಸ್ಥಾನದಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯ ಇಟಗಿ ವಿದ್ಯಾರ್ಥಿನಿ ಕು.ರಾಜೇಶ್ವರಿ ಚನ್ನಪ್ಪಗೌಡರ ಇವಳು 618 ಅಂಕ ಪಡದಿದ್ದಾಳೆ.
  • ತೃತೀಯ ಸ್ಥಾನವನ್ನು ಲಕ್ಷ್ಮೇಶ್ವರ ಪಟ್ಟಣದ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿ ಕು.ಆದರ್ಶ ಹತ್ತಿಕಾಳ ವಿದ್ಯಾರ್ಥಿಯು 617 ಅಂಕ ಪಡೆದಿದ್ದಾನೆ.

 

ಈ ಬಾರಿಯೂ ಉತ್ತಮ ಫಲಿತಾಂಶ ಲಭ್ಯವಾಗಿದ್ದು ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ ಒಟ್ಟಾರೆ ಜಿಲ್ಲೆಯಲ್ಲಿ 85.69% ಗಳಿಸಿದ್ದಾರೆ.

-ಬಸವಲಿಂಗಪ್ಪ ,ಡಿಡಿಪಿಐ

Share this Article