ಗಜೇಂದ್ರಗಡ: ರೋಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ ಸೋಮವಾರ ರೋಣದ ಸೂಡಿ ವೃತ್ತದಿಂದ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ವಿವಿಧ ಬೀದಿಯಲ್ಲಿ ಸಂಚರಿಸಿ ಭರ್ಜರಿ ರೋಡ ಶೋ ನಡೆಸಿದರು.
ನಂತರ ಕೋಟೆನಾಡು ಗಜೇಂದ್ರಗಡದ ಚೌಕಿಮಠದ ಮುಂಭಾಗದಿಂದ ಪ್ರಾರಂಭವಾದ ರೋಡ್ ಶೋ ಬಸವೇಶ್ವರರ ವೃತ್ತ ಬಜರಂಗದಳ ವೃತ,ಹಿರೇಬಜಾರ ಕಟ್ಟಿ ಬಸವೇಶ್ವರ ರಂಗಮಂದಿರ, ಕೊಳ್ಳೆಯವರ ವೃತ್ತ, ದುರ್ಗಾ ವೃತ್ತ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತ ತಲುಪಿತು.
ಬಳಿಕ ಕೈ ಅಭ್ಯರ್ಥಿ ಜಿ.ಎಸ್.ಪಾಟೀಲ ಮಾತನಾಡಿ ಈ ರೋಡ ಶೋ ಮೂಲಕ ತಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ ಇದೇ ನಿಮ್ಮ ಪ್ರೀತಿ ವಿಶ್ವಾಸ ಮೇ ೧೦ ರಂದು ನಡೆಯುವ ಮತದಾನದಲ್ಲಿ ಕೂಡ ನನ್ನನ್ನ ಗೆಲ್ಲಿಸುವಲ್ಲಿ ತಾವೆಲ್ಲರೂ ಮುಂಚೂಣಿಯಲ್ಲಿರುತ್ತೀರಿ ಎಂದು ಭಾವಿಸಿದ್ದೇನೆ ಎಲ್ಲಾ ಸಮುದಾಯದ ಜನರು ಪ್ರೀತಿಯಿಂದ ನನ್ನನ್ನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ಸಿದ್ದಣ್ಣ ಬಂಡಿ, ಶಿವರಾಜ ಘೋರ್ಪಡೆ, ಟಿ.ಈಶ್ವರ, ಎಚ್.ಎಸ್.ಸೊಂಪೂರ, ಅಶೋಕಕುಮಾರ ಬಾಗಮಾರ, ಸುಭಾನಸಾಬ ಆರಗಿದ್ದಿ, ಎ.ಡಿ.ಕೋಲಕಾರ, ಚಂಬಣ್ಣ ಚವಡಿ, ರಫೀಕ ತೊರಗಲ್, ವೀರಣ್ಣ ಶೆಟ್ಟರ, ಬಸವರಾಜ ಹೂಗಾರ, ಮುರ್ತುಜಾ ಡಾಲಾಯತ, ಬಸವರಾಜ ಚನ್ನಿ, ಅರಿಹಂತ ಭಾಗಮಾರ, ಅಂದಪ್ಪ ರಾಠೋಡ, ಮಂಜುಳಾ ರೇವಡಿ, ಸುಮಂಗಲಾ ಇಟಗಿ, ಶಾರದಾ ರಾಠೋಡ, ನೀಲಮ್ಮ ಬಳೂಟಗಿ, ಶಶಿಧರ ಹೂಗಾರ, ಉಮೇಶ ರಾಠೋಡ, ಪ್ರಭು ಚವಡಿ, ರಾಜು ಆರಗಿದ್ದಿ, ರಾಜೂ ಸಾಂಗ್ಲೀಕರ್, ರೇಣಪ್ಪ ಇಂಗಳೆ ಹಾಜರಿದ್ದರು.