ಗಜೇಂದ್ರಗಡ : ಸ್ಥಳೀಯ ಬಿಜೆಪಿ ಹಿರಿಯ ನಾಯಕ ಮಾಜಿ ಸ್ಥಾಯಿ ಸಮಿತಿ ಚೆರಮನ್ ಶರಣಪ್ಪ ರೇವಡಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಬಳಿಕ ಅಭ್ಯರ್ಥಿ ಜಿ.ಎಸ್.ಪಾಟೀಲ ಮಾತನಾಡಿ
ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ, ಕಾಂಗ್ರೆಸ್ ಗೆಲ್ಲಿಸಲು ಜನ ಸೇರಿದರು ತೀರ್ಮಾನಿಸಿದ್ದಾರೆ.ಹಿರಿಯರು ಹಾಗೂ ಮಾರ್ಗದರ್ಶನದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇದೆ ಎಂದರು.
ಕಾಂಗ್ರೆಸ್ ನಾಯಕ ಸಿದ್ದಪ್ಪ ಬಂಡಿ ಮಾತನಾಡಿ, ಬಿಜೆಪಿ ಪುರಸಭೆ ಮಾಜಿ ಸದಸ್ಯ, ಜತಗೆ ಪಕ್ಷದಲ್ಲಿ ದಶಕದಿಂದ ರಾಜಕೀಯ ಚಟುವಟಿಕೆಯಲ್ಲಿ ತೊಡಗಿರುವ ಶರಣಪ್ಪ ರೇವಡಿ ಕಾಂಗ್ರೆಸ್ ಎಂಟ್ರಿ ಪಕ್ಷಕ್ಕೆ ಬಲ ತುಂಬಿದೆ. ಇನ್ನಷ್ಟು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ.
ಶರಣಪ್ಪ ರೇವಡಿ ಮಾತನಾಡಿ, ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ಕೊಡುವದಿಲ್ಲಾ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಆದ್ದರಿಂದ ಕಾಂಗ್ರೆಸ್ ಸೇರಿದೆ ಎಂದರು.