ಗಜೇಂದ್ರಗಡ :ನಗರದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಮುಖಂಡರು ಡಾ.ಪ್ರಶಾಂತ ಪಾಟೀಲ ಸಮ್ಮುಖದಲ್ಲಿ ಅನೇಕ ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ನಗರದಲ್ಲಿನ ನರೇಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ೧೧ ನೇ ವಾರ್ಡಿನ ಯುವಕರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಡಾ. ಪ್ರಶಾಂತ ಪಾಟೀಲ ಮಾತನಾಡಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತ ಯುವ ಜನತೆ ಕಾಂಗ್ರೆಸ ಪಕ್ಷ ಸೇರುತ್ತಿದ್ದಾರೆ ಈ ಸಾರಿ ರೋಣ ಮತಕ್ಷೇತ್ರದಲ್ಲಿ ಜಿ.ಎಸ್. ಪಾಟೀಲರ ಗೆಲುವು ನಿಶ್ಚಿತ.ನೂತನವಾಗಿ ಕಾಂಗ್ರೆಸ್ ಸೇರಿದವರೆಲ್ಲರೂ ತಮ್ಮ ಮತದ ಜೊತೆಗೆ ತಮ್ಮ ಮನೆಯ, ಸ್ನೇಹಿತರ ಮತಗಳನ್ನು ಜಿ.ಎಸ್.ಪಾಟೀಲರಿಗೆ ಹಾಕಿರುವ ಮೂಲಕ ಅಭೂತಪೂರ್ವ ಗೆಲುವಿಗಾಗಿ ಶ್ರಮ ವಹಿಸಿರಿ ಎಂದರು.
ಬಳಿಕ ಶ್ರೀಧರ ಬೋನೇರಿ ಮಾತನಾಡಿ ಸೇರ್ಪಡೆಗೊಂಡ ಯುವಕರೆಲ್ಲರೂ ನಾವು ಸ್ವ ಇಚ್ಛೆಯಿಂದ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಹೆಚ್ಚು ಮತಗಳನ್ನು ಹಾಕಿಸುವ ಮೂಲಕ ಕೈ ಬಲಪಡಿಸುತ್ತೇವೆ ಎಂದರು.
ನರೆಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ ಮಾತನಾಡಿ ಕೋಟೆನಾಡಿನ ಮೂಲಕವೇ ಜಿ.ಎಸ್.ಪಾಟೀಲರ ಗೆಲುವಿನ ಸರದಿ ಪ್ರಾರಂಭವಾಗಲಿದೆ.ಈ ಬಾರಿಯ ಚುನಾವಣೆಯಲ್ಲಿ ಹಿಂದೆದೂ ಊಹಿಸಲಾಗದಂತ ರೇಸ್ಪಾಸ್ ಸಿಕ್ಕಿದೆ.ಜನರು ಕೂಡಾ ಜಿ.ಎಸ್.ಪಾಟೀಲರು ಮಾಡಿದ ಅಭಿವೃದ್ಧಿ ಹಾಗೂ ಅವರು ನಡೆದುಕೊಳ್ಳುವ ರೀತಿ ನೀತಿಗಳು, ಹಿರಿಯರಿಗೆ ನೀಡುವ ಗೌರವ, ಯುವಕರಿಗೆ ನೀಡುವ ಸ್ಪೂರ್ತಿ ಇವೆಲ್ಲವೂ ಅವರ ಗೆಲುವಿನ ಮೆಟ್ಟಿಲುಗಳಾಗಿವೆ ಎಂದರು.
ಬಳಿಕ ಶ್ರೀಧರ್ ಬೋನೆರಿ, ಶಿವಕುಮಾರ್ ದಿವಾನದ, ಮಲ್ಲು ಮಾದರ, ಅರುಣ್ ಬೋನೆರಿ, ಮಲ್ಲು ಕುರಿ,ಸುರೇಶ ಗೌಡ, ಶಶಿಕುಮಾರ್ ದಿವಾನದ, ಅಭಿಷೇಕ ಚೋಪದೇ, ರವಿಕುಮಾರ ಹಡಪದ, ಪ್ರಶಾಂತ ಕಂಬಾರ, ಆನಂದ ನಿಲಗುಂದಿ, ದಾದುಸಾಬ ಮನಿಯಾರ,ಭೀಮು ಮ್ಯಾಗೇರಿ, ಅಕ್ಷಯ ಮಂಠ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಇದೇ ಸಂದರ್ಭದಲ್ಲಿ ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ರವಿ ಗಡೇದವರ, ಅಪ್ಪು ಮತ್ತಿಕಟ್ಟಿ, ಮುತ್ತಣ್ಣ ಮ್ಯಾಗೇರಿ,ಅರಿಹಂತ ಭಾಗಮಾರ,ಪ್ರಕಾಶ ದಿವಾಣದ, ಅಂದಪ್ಪ ರಾಠೋಡ, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.