ಮುಂಡರಗಿ: ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಪಕ್ಷಕ್ಕೆ ಮುಂಡರಗಿಯ ಕಾಂಗ್ರೆಸ್ ಮುಖಂಡ ಕೊಟ್ರೇಶಪ್ಪ ಅಂಗಡಿ ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು ಯೋಜನೆಗಳು ಅಭಿವೃದ್ಧಿ ಹಾದಿ ಹಾಗೂ ಸಾಮಾನ್ಯ ಕಾರ್ಯಕರ್ತನನ್ನು ಕೂಡ ಗುರುತಿಸುವ ಪಕ್ಷದ ಸಿದ್ಧಾಂತಕ್ಕೆ ಮರಳಿ ಪಕ್ಷ ಸೇರಿದ್ದೇವೆ ಎಂದು ಕೊಟ್ರೇಶಪ್ಪ ಅಂಗಡಿ ಹೇಳಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ವಿಶ್ವಾಸ ಅರ್ಹತೆ ಕೊರತೆಯಿಂದ ಬದಲಾವಣೆಯಾಗುತ್ತಿದೆ ನಮ್ಮ ಅಭ್ಯರ್ಥಿ ಈ ಬಾರಿ ದಾಖಲೆಯ ಮತಗಳಿಂದ ಗೆಲ್ಲುವುದು ನಿಶ್ಚಿತ ಕಾಂಗ್ರೆಸ್ ಪಕ್ಷಕ್ಕೆ ಜನರ ಮೇಲೆ ಗ್ಯಾರಂಟಿ ಇಲ್ಲ ಹೀಗಾಗಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದ ಸುನಾಮಿ ಪ್ರಾರಂಭವಾಗಿದೆ ತಾವೆಲ್ಲರೂ ಪಕ್ಷಕ್ಕೆ ಬಂದಿದ್ದು ಮತ್ತಷ್ಟು ಶಕ್ತಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷರಾದ ಹೇಮಗಿರೀಶ ಹಾವಿನಾಳ ಮಾತನಾಡಿ ನರೇಂದ್ರ ಮೋದಿ ಅವರು ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ತತ್ವ ಸಿದ್ಧಾಂತಗಳನ್ನ ನೋಡಿದಾಗ ಭಾರತ ವಿಶ್ವಗುರುವಾಗುವ ಮುನ್ನಡೆದಿದೆ . ಪಕ್ಷ ಸಂಘಟಿಸಿದವರನ್ನು ಪಕ್ಷ ಗುರುತಿಸಿ ಒಳ್ಳೆಯ ಹುದ್ದೆ ನೀಡುತ್ತದೆ . ಶಿರಹಟ್ಟಿ ಕ್ಷೇತ್ರದಲ್ಲಿ ಯಾವುದೇ ಬಿಜೆಪಿ ಕಾರ್ಯಕರ್ತರ ಆಗಲಿ ನಾಯಕರಾಗಲಿ ಯಾರೂ ಕೂಡ ಕಾಂಗ್ರೆಸ್ ಪಕ್ಷವನ್ನ ಸೇರಿಲ್ಲ ಆದರೆ ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಜನರು ಬಿಜೆಪಿ ಸೇರಿದ್ದು ಈ ಬಾರಿ ಈ ಭಾಗದಲ್ಲಿ ಶೇಕಡ 90ರಷ್ಟು ಬಿಜೆಪಿ ಮತ ಪಡೆಯುತ್ತದೆ ಎಂದು ಹೇಮಗಿರಿಶ ಹಾವಿನಾಳ ಹೇಳಿದರು.
ಈ ಸಂದರ್ಭದಲ್ಲಿ ಕರಬಸಪ್ಪ ಹಂಚಿನಾಳ, ಭೀಮ್ ಸಿಂಗ್ ರಾಥೋಡ, ಲಿಂಗರಾಜ ಗೌಡ ಪಾಟೀಲ, ಎಸ್ ವಿ ಪಾಟೀಲ, ಎಚ್ ವಿರುಪಾಕ್ಷಿ ಗೌಡ್ರು, ಹನುಮಂತಪ್ಪ ಹೆಗ್ಡಾಳ, ದೇವಪ್ಪ ರಾಮೇನಹಳ್ಳಿ, ನಾಗೇಶ್ ಹುಬ್ಬಳ್ಳಿ, ಜ್ಯೋತಿ ಹಾನಗಲ, ಪವಿತ್ರ ಕಲಕುಟಗಾರ ಸೇರಿದಂತೆ ಮುಂತಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.