ಗದಗ : ಗದಗ-ಬೆಟಗೇರಿ ನಗರಸಭೆ ವಾರ್ಡ ನಂ. 6 ರ ಸದಸ್ಯೆ ಲಕ್ಷ್ಮವ್ವ ಭಜಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಲಕ್ಷ್ಮಣ ಭಜಂತ್ರಿ ನೇತೃತ್ವದಲ್ಲಿ ವಾರ್ಡ ನಂ. 6 ರಲ್ಲಿ ಬರುವ ಬೂತ್ ನಂ. 29 ಮತ್ತು 30, 32, 37, 38, 39 ರಲ್ಲಿ ಕಾಂಗ್ರೆಸ ಅಭ್ಯರ್ಥಿ ಡಾ. ಎಚ್. ಕೆ. ಪಾಟೀಲರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಭಜಂತ್ರಿ ಮಾತನಾಡಿ ಕಾಂಗ್ರೆಸ್ ಪಕ್ಷ ದೀನದಲಿತರ, ಅಲ್ಪಸಂಖ್ಯಾತರ, ಬಡವರ ಪಕ್ಷವಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೆ 30 ಕೆ.ಜಿ. ಉಚಿತ ಅಕ್ಕಿ ನೀಡಿ ಹಸಿವು ಮುಕ್ತ ರಾಜ್ಯ ಮಾಡಿದ್ದು ಕಾಂಗ್ರೆಸ ಸರ್ಕಾರ, ರೈತರ ಮತ್ತು ದಲಿತರ ಮತ್ತು ಹಿಂದುಳಿದ ವರ್ಗದವರು ವಿವಿಧ ಮಂಡಳಿಗಳಿಂದ ಪಡೆದ ಸಾಲವನ್ನು ಮಾಡಿದ್ದು ಕಾಂಗ್ರೆಸ ಸರ್ಕಾರ ಎಂದು ಹೇಳಿದರು.
ಇನ್ನೋರ್ವ ಮುಖಂಡರಾದ ಬಸವರಾಜ ಭಜಂತ್ರಿ ಮಾತನಾಡಿ ಡಾ. ಎಚ್. ಕೆ. ಪಾಟೀಲರು ಕಳೆದ 8 ತಿಂಗಳಿಂದ ಅವರ ಸೇವಾ ತಂಡದಿಂದ ಅನೇಕ ಜನಪರ ಕೆಲಸಗಳಾಗಿದ್ದು ಉಚಿತ ನೇತ್ರ ತಪಾಸಣೆ, ಕೃತಕ ಕಾಲು ಜೋಡಣೆ, ರೇಷನ್ ಕಾರ್ಡ, ಕಾರ್ಮಿಕ ಕಾರ್ಡು, ಆಭಾ ಕಾರ್ಡು, ನೇತ್ರ ದೋಷ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ಕನ್ನಡಕ ವಿತರಿಸಿದ್ದಾರೆ ಇಂತಹ ಮಾನವೀಯ ಗುಣಗಳನ್ನು ಹೊಂದಿರುವ ಡಾ. ಎಚ್. ಕೆ. ಪಾಟೀಲರನ್ನು ಆರಿಸಿ ಕಳುಹಿಸ ಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಿವಾನಂದ ಭಜಂತ್ರಿ, ಫಕ್ಕೀರಪ್ಪ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಶೌಕತ ಅಣ್ಣಿಗೇರಿ, ಬಾಬು ನರಸಾಪೂರ, ಕಿರಣ ಮಾಕಾಪೂರ, ಶಿವಪುತ್ರಪ್ಪ ಹಾಳಕೇರಿ, ವಾಯ್. ಆರ್. ಪಾಟೀಲ, ಮಂಜುನಾಥ ಭಜಂತ್ರಿ, ಮಹಾಂತೇಶ ದೊಡ್ಡಮನಿ, ಹನಮಂತ ತಳ್ಳಿಹಾಳ, ಕೊಟಗಿ ಸರ್, ಅನ್ವರ ನದಾಫ, ಎಂ. ಐ. ಮುಲ್ಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.