ವಾರ್ಡ ನಂ 7 ರಲ್ಲಿ ಮನೆ ಮನೆ ಮತಯಾಚನೆ

ಸಮಗ್ರ ಪ್ರಭ ಸುದ್ದಿ
1 Min Read

ಬೆಟಗೇರಿ: ವಾರ್ಡ 7 ರ ವಿವಿಧ ಭಾಗಗಳಿಗೆ ತೆರಳಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಅನಿಲ ಮೆಣಸಿನಕಾಯಿಯವರ ಚುನಾವಣಾ ಪ್ರಯುಕ್ತ ಮನೆ ಮನೆ ಸಂಪರ್ಕವನ್ನು ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀಯವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರು ರೈತ ಹಾಗೂ ನೇಕಾರಿಕೆ ಕುಟುಂಬಗಳಿಗೆ ಸಹಾಯ ಧನವನ್ನು ನೇರವಾಗಿ ಅವರವರ ಬ್ಯಾಂಕ ಖಾತೆಗೆ ಹಾಕುವದರ ಮೂಲಕ ಅವರ ಕಷ್ಟಕ್ಕೆ ಸಹಕಾರಿಯಾಗಿದ್ದಾರೆ ಜೊತೆಗೆ ಕಾರ್ಮಿಕ ವರ್ಗದವರಿಗೆ ಅವರ ಕಸಬಿಗೆ ತಕ್ಕಂತೆ ಸಾಮಗ್ರಿಗಳ ಕಿಟ್ ನೀಡಿ ಉತೇಜನ ನೀಡಿದ್ದಾರೆ ಎಂದು ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಯಳವತ್ತಿ ತಿಳಿಸಿ ಕಮಲದ ಚಿಹ್ನೆಗೆ ಮತ ನೀಡಲು ವಿನಂತಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಕಾರ್ಯದರ್ಶಿ ಚಿನ್ನಪ್ಪ ನೆಗಳೂರ, ರವಿ ಚೋಳಿನ, ಬಸವರಾಜ ಗುಂಡಗಿ, ವೆಂಕಟೇಶ ಬಳ್ಳಾರಿ, ಈರಣ್ಣಾ ಯಳವತ್ತಿ, ನಾಗೇಶ ಗುಂಡಗಿ, ಮಂಜುನಾಥ ಬಗನಾಳ, ಸಂತೋಷ ಢಗೆ, ತಿಮಯ್ಯ ದ್ಯಾವನಕೊಂಡಿ, ಮಲ್ಲಿಕಾರ್ಜುನ ಬೇಲೇರಿ, ರಾಜು ಲಕ್ಕುಂಡಿ, ಮೈಲಾರಿ ತುರಕಾಣಿ, ತಾಕಪ್ಪ ಕಾತಣಕಿ, ಗೌರೀಶ ಬೇಲೇರಿ ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮಹಿಳಾ ತಾಯಂದಿರು ಹಿರಿಯರು ಯುವಕರು ಪ್ರಚಾರದಲ್ಲಿ ಭಾಗಿಯಾಗಿದ್ದರು.

Share this Article