ಗಜೇಂದ್ರಗಡ : ನಗರದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಭಜರಂಗದಳದ ವತಿಯಿಂದ ಗುರುವಾರ ಮೈಸೂರು ಮಠದಲ್ಲಿದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಬಳಿಕ ಭಜರಂಗದಳದ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ ಮಾತನಾಡಿ ರಾಷ್ಟ್ರದ ಸ್ವಾತಂತ್ರ್ಯ ದೆಸೆಯಿಂದಲೂ ದೇಶಭಕ್ತಿಯ ಪ್ರತೀಕವಾಗಿ ಯುವಪಡೆ ಭಜರಂಗದಳದ ಶಿರೋನಾಮೆಯೊಂದಿಗೆ ಕಾರ್ಯನಿರ್ವಹಿಸುತ್ತಾ ಬರುತ್ತದೆ. ಇಂತಹ ದೇಶಭಕ್ತಿಯ ಪ್ರತೀಕವಾದ ಭಜರಂಗದಳವನ್ನು ದೇಶದ್ರೋಹಿ ಪಿಎಪ್ಐ ಸಂಘಟನೆಯೊಂದಿಗೆ ಹೋಲಿಸಿ ಭಜರಂಗದಳದ ನಿಷೇದಕ್ಕೆ ಧ್ವನಿ ಎತ್ತಿದ ಕಾಂಗ್ರೆಸ್ ದೇಶಪ್ರೇಮದ ಹಾಗೂ ದೇಶದ್ರೋಹದ ಅರ್ಥವೇ ಗೊತ್ತಿಲ್ಲದಂತೆ ವರ್ತಿಸುವುದು ಖಂಡಿನೀಯ, ರಾಷ್ಟ್ರದ ಭವ್ಯತೆಗೆ, ಏಕತೆಗೆ ದಕ್ಕೆ ತರುವಂತಹ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿರುವುದು ಅತ್ಯಂತ ಹೀನ ಕಾರ್ಯವಾಗಿದೆ ಇದರಿಂದ ರೊಚ್ಚಿಗೆದ್ದ ದೇಶಪ್ರೇಮಿಗಳ ಯುವಪಡೆ ಭಜರಂಗದಳದ ಯುವಕರು ಪಿಎಫ್ಐ ಮತ್ತು ಭಜರಂಗದಳವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಈ ಹೇಳಿಕೆಯೊಂದಿಗೆ ಕಾಂಗ್ರೆಸ್ ಇದ್ದ ಘನತೆಯನ್ನು ನೆಲಕಚ್ಚಿಸಿಕೊಂಡಿದೆ ಎಂದು ಗುಡುಗಿದರು.
ಬಳಿಕ ಭಜರಂಗದಳದ ಜಿಲ್ಲಾ ಮುಖಂಡ ಸಂಜೀವ ಜೋಶಿ ಮಾತನಾಡಿ ಜಾತ್ಯಾತೀತ ರಾಷ್ಟ್ರವನ್ನು ಮಾಡುವುದರ ಮೂಲಕ ನಮ್ಮ ಹಿಂದೂಗಳನ್ನ ನಾಶ ಮಾಡುವ ನಿಟ್ಟಿನಲ್ಲಿ ನಮ್ಮನು ಕೂಪಕ್ಕೆ ತಳ್ಳುವಂತಹ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಲು ಮುದ್ದಾಗಿದ್ದು ನೋವಿನ ಸಂಗತಿ.
ಜಿಲ್ಲೆಯಲ್ಲಿ 48000 ಹನುಮ ಮಾಲಾದಾರಿಗಳು ಇದ್ದು ಪ್ರತಿಯೊಬ್ಬರಿಂದ 13 ಹಿಂದೂಪರ ಇರುವಂತಹ ವ್ಯಕ್ತಿಗೆ ಮತ್ತು ಪಕ್ಷಕ್ಕೆ ಮತ ಹಾಕಲು ಸಂಕಲ್ಪ ಹಾಗೂ ರಾಜ್ಯಾದ್ಯಂತ ಎಲ್ಲಾ ಮತಕ್ಷೇತ್ರದಲ್ಲೂ ಕೂಡ ಕಾಂಗ್ರೆಸಗೆ ಮತ ನೀಡದಿರಲು ಭಜರಂಗದಳ ಕರೆ.
ಗುರುವಾರ ಸಂಜೆ ಹನುಮ ಭಕ್ತರಿಂದ ಪ್ರತಿಯೊಂದು ಹಿಂದೂ ದೇವಾಲಯಗಳ್ಳಲ್ಲಿ ಸಾಮೂಹಿಕ ಹನುಮಾನ ಚಾಲೀಸ್ ಪಠಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೀರಣ್ಣ ಹೇಮಾದ್ರಿ, ಮಾರುತಿ ಪವಾರ, ಸಂಜೀವ ಜೋಶಿ, ಮಂಜುನಾಥ ಹೆಗಡೆ ಶರಣಪ್ಪ ಕಾಡರ ಸೇರಿದಂತೆ ಅನೇಕ ಹನುಮ ಭಕ್ತರು ಮತ್ತು ಭಜರಂಗದಳ ಕಾರ್ಯಕರ್ತರು ಹಾಜರಿದ್ದರು.