ಸಾಮಾಜಿಕ ನ್ಯಾಯದಡಿ ಸುಜಾತಾ ದೊಡ್ಡಮನಿ ಅವರಿಗೆ ಟಿಕೇಟ್ ನೀಡಿದ್ದೇವೆ

ಸಮಗ್ರ ಪ್ರಭ ಸುದ್ದಿ
1 Min Read

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಬಿಜೆಪಿ ಏಜೆಂಟ್

ಶಿರಹಟ್ಟಿ: ಮಾಜಿ ಶಾಸಕ‌ ರಾಮಕೃಷ್ಣ ದೊಡ್ಡಮನಿ ಭಾರತೀಯ ಜನತಾ ಪಾರ್ಟಿ ಏಜೆಂಟ್ ಅವನಿಗೆ ಓಟ್ ಹಾಕಬೇಡಿ ಎಂದು ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಾಲೂಕಿನ ಬೆಳ್ಳಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ರಾಮಕೃಷ್ಣ ದೊಡ್ಡಮನಿ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ನಾನು ಇವತ್ತು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಗೆ ಬರುವಂತೆ ಹೆಚ್ ಕೆ. ಪಾಟೀಲ್, ಜಿ ಎಸ್. ಗಡ್ಡದ್ದೇವರಮಠ ಹಾಗೂ ಅನೇಕ ನಾಯಕರ ಒತ್ತಾಯದ ಮೇಲೆ ಬಂದಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯದ ನಿಯಮಾನುಸಾರ ಸುಜಾತಾ ದೊಡ್ಡಮನಿ ಅವರಿಗೆ ಟಿಕೇಟ್ ನೀಡಿದ್ದು ಅವರನ್ನು ಆರಿಸಿ ತರಬೇಕು ಮತ್ತೊಮ್ಮೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ರಾಮಕೃಷ್ಣ ದೊಡ್ಡಮನಿಯವರನ್ನು ಉಚ್ಛಾಟನೆ ಮಾಡುವಂತೆ ಸಲೀಂ ಅಹ್ಮದ್ ಅವರಿಗೆ ಸೂಚನೆ ನುಡಿದರು.

ಈ ಸಂದರ್ಭದಲ್ಲಿ ಹೆಚ್ ಕೆ ಪಾಟೀಲ, ಸಲೀಂ ಅಹ್ಮದ್, ಜಿ ಎಸ್ . ಗಡ್ಡದ್ದೇವರಮಠ, ಕೆ ಬಿ. ಕೋಳಿವಾಡ, ಐ ಜಿ. ಸನದಿ, ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಎಸ್ ಪಿ. ಬಳಿಗೇರ, ವಾಯ್ ಎನ್. ಗೌಡರ ಹಾಗೂ ಹುಮಾಯೂನ್ ಮಾಗಡಿ ಇದ್ದರು.

Share this Article