ದುರ್ಗಾದೇವಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘದಿಂದ ಕಾರ್ಮಿಕ ದಿನಾಚರಣೆ ಆಚರಣೆ.

graochandan1@gmail.com
1 Min Read

ಗಜೇಂದ್ರಗಡ:ನಗರದಲ್ಲಿನ ಶ್ರೀ ದುರ್ಗಾದೇವಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ವತಿಯಿಂದ ಸೋಮವಾರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಬಳಿಕ ಸಂಘದ ಅಧ್ಯಕ್ಷ ಯಲ್ಲಪ್ಪ ಬಂಕದ ಮಾತನಾಡಿ ಈ ಹಿಂದೆ ಕೆಲಸದ ಅವಧಿಯೇ ಇರಲಿಲ್ಲ. ಭೂಮಾಲೀಕರು, ಬಂಡವಾಳಷಾಹಿಗಳು ಮನಬಂದಂತೆ ಕೂಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಆದರೆ, ಎಡಪಂಥೀಯ ಹಾಗೂ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಶೋಷಣೆಗೆ ಕಡಿವಾಣ ಬಿದ್ದಿದೆ ಎಂದರು‌

ಬಳಿಕ ಪುರಸಭೆ ಸದಸ್ಯ ಮುದಿಯಪ್ಪ ಮುಧೋಳ ಮಾತನಾಡಿ ಹಗಲು ರಾತ್ರಿ ಎಂದು ನೋಡುವುದಿಲ್ಲ, ಬಿಸಿಲು ಮಳೆ ಗಾಳಿಗೂ ಜಗ್ಗುವುದಿಲ್ಲ, ಕಠಿಣ ಪರಿಶ್ರಮ, ಸಮರ್ಪಣಾ ಭಾವಕ್ಕೆ ಇವರು ಸಾಕ್ಷಿಯಾಗಿದೆ ಈ ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದು ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿಯಡಗಿದೆ ಎಂದರು.

- Advertisement -
Ad image

ಬಳಿಕ ಯುವ ಮುಖಂಡ ಶ್ರೀನಿವಾಸ ಕಲ್ಲೋಡರ ಮಾತನಾಡಿ
ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತೆ.ಇಂತಹ ಶ್ರಮಜೀವಿಗಳ ಕೆಲಸವನ್ನು ಗೌರವಿಸುವ, ಇವರ ಶ್ರಮವನ್ನು ಗುರುತಿಸುವ, ಇವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಎಂದು ಆಚರಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಹನುಮಂತ ಕಲ್ಲೊಡ್ಡರ ಮಾರುತಿ ಕಲ್ಲೊಡ್ಡರ,ತಿರುಪತಿ ಕಲ್ಲೊಡ್ಡರ,ಮುದಿಯಪ್ಪ ಮುಧೋಳ,ಷಣ್ಮುಖಪ್ಪ ಚಿಲಝೇರಿ ಬಸವರಾಜ ಬಂಕದ , ಮೂಕಪ್ಪ ಗುಡೂರ ,ಶರಣಪ್ಪ ಚಳಗೇರಿ,ಮಲ್ಲಪ್ಪ ಕಲ್ಲೊಡ್ಡರ,ಶಿವಮೂರ್ತಿ ನಿಡಗುಂದಿ,ಸೇರಿದಂತೆ ಅನೇಕರ ಇದ್ದರು.

Share this Article