ಗದಗ: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ
80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಮತದಾನ ಆರಂಭಗೊಂಡಿದ್ದು ಜಿಲ್ಲಾಡಳಿತ ದಿಂದ ಮನೆ ಮನೆಗೆ ತೆರಳಿ ಬ್ಯಾಲೆಟ್ ಪೇಪರ ಮುಖಾಂತರ ಮತದಾನ ಮಾಡಿಸುತ್ತಿರುವ ಚುನಾವಣಾಧಿಕಾರಿಗಳು.
ಗದಗ ಜಿಲ್ಲೆಯಲ್ಲಿ 80 ವರ್ಷ ಮೀರಿದ ಒಟ್ಟು 14896 ಮತದಾರರಿದ್ದು 11254 ಅಂಗವಿಕಲ ಮತದಾರರಿದ್ದು ಈ ಪೈಕಿ 80 ವರ್ಷ ಮೀರಿದ 872 ಮತದಾರರು 183
ಅಂಗವಿಕಲ ಮತದಾರರು ಮನೆಯಲ್ಲಿ ಮತದಾನ ಮಾಡಲು ನೋಂದಣಿ ಮಾಡಿಸಿದ್ದಾರೆ ಮತದಾನ ಮಾಡುತ್ತಿರುವ ಸಮಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಮ್ ಎಲ್ ನೇತೃತ್ವದಲ್ಲಿ ತಂಡ ಮನೆ ಮನೆ ತೆರಳಿ ಮತದಾನ ಮಾಡಿಸುತ್ತಿದ್ದಾರೆ.