ಮತದಾರರ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ
ಗದಗ : ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೇ ಜಿಲ್ಲೆಯಾದ್ಯಂತ ಮತದಾರರ ಜಾಗೃತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರನ್ನು ಮತ ಚಲಾಯಿಸುವಂತೆ ಪ್ರೇರೆಪಿಸಲಾಗಿದೆ. ಏಪ್ರೀಲ್ 29, 30 ರಂದು ಜಿಲ್ಲೆಯ ಎಲ್ಲ ಮತದಾರರು ತಾವು ಮತ ಹಾಕುವ ಮತಗಟ್ಟೆಗಳನ್ನು ನೋಡಿಕೊಂಡು ಹೋಗಲು ಅವಕಾಶ ಕಲ್ಪಿಸಿದೆ. ಆ ದಿನಗಳಂದು ಮತಗಟ್ಟೆಗಳನ್ನು ತೆರೆದಿಡುವ ಮೂಲಕ ಮತಗಟ್ಟೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ ಬಿ ತಿಳಿಸಿದ್ದಾರೆ.
ಒಂದೇ ಜಾಗದಲ್ಲಿ ಒಂದೆ ಕಡೆ ಒಂದಕ್ಕಿಂತ ಹೆಚ್ಚು ಮತಗಟ್ಟೆಗಲು ಇರುವಂತಹ ಜಾಗಗಳಲ್ಲಿ ಮತಗಟ್ಟೆಗಳನ್ನು ವೀಕ್ಷಿಸಲು ಬರುವ ಮತದಾರರಿಗೆ (ಮತಗಟ್ಟೆಗೆ) ಹೋಗಬೇಕೆಂಬುದರ ಕುರಿತು ಮಾರ್ಗದರ್ಶನ ನೀಡಲಾಗುವದು. ಅಲ್ಲದೇ ಬಿಸಿಲಿನ ತಾಪಮಾನ ಅಧಿಕವಾಗಿರುವ ಹಿನ್ನಲೆಯಲ್ಲ ಮತಗಟ್ಟೆ ಪಕ್ಕದಲ್ಲಿ ನೀರಿಕ್ಷಣಾ ಕೊಠಡಿ ತೆರೆದು ಅಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಏಪ್ರೀಲ 29, 30 ರಂದು ಜಿಲ್ಲೆಯ ಎಲ್ಲ ಪ್ರಮುಖ ಸ್ಥಳ, ನಗರ, ಪಟ್ಟಣ, ಹೊಬಳಿ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ಅತೀ ಕಡಿಮೆ ಮತದಾನವಾದಂತಹ ಸ್ಥಳಗಳಲ್ಲಿ ಸ್ವೀಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗದೆ. ಬೀದಿ ನಾಟಕ, ಬೃಹತ ಜಾಥಾ, ಚಿತ್ರಕಲೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಅಲ್ಲದೇ ಮತದಾನದ ದಿನದಂದು ವಿಶೇಷ ಮತಗಟ್ಟೆಗಳನ್ನು ತೆರೆಯಲು ಕ್ರಮ ವಹಿಸಲಾಗುತ್ತಿದ್ದು ಪ್ರತಿ ವಿಧಾನಸಭಾ ಕ್ಷೇತ್ರವಾರು ಸಖಿ ಮತಗಟ್ಟೆ, ವಿಶೇಷ ಚೇತನರಿಂದ ನಿರ್ವಹಿಸುವ ಮತಟ್ಟೆ, ಯುವ ಜನರಿಂಧ ನಿರ್ವಹಿಸುವ ಮತಗಟ್ಟೆ, ಧ್ಯೇಯ ಆಧಾರಿತ ಮತಗಟ್ಟೆ, ಗಿರಿಜನ ಮತಗಟ್ಟೆ ತೆರೆಯುವ ಮೂಲಕ ಮತದಾರರನ್ನು ಪ್ರೇರೆಪಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.