ಗದಗ: 2023 ನೇ ವಿಧಾನಸಭಾ ಚುನಾವಣಾ ಅಂಗವಾಗಿ ಗದಗ ಮತ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹಾಗೂ ಸಿದ್ದು ಮೆಣಸಿನಕಾಯಿ ನೇತೃತ್ವದ ಮಂಗಳವಾರ ಹಿರೇಹಂದಿಗೊಳ,ಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದಲ್ಲಿ ಡೊಳ್ಳು ಕುಣಿತದೊಂದಿಗೊ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿರು.
ನೂರಾರು ಮತದಾರರು ಅನಿಲ ಮೆಣಸಿನಕಾಯಿ ಅವರಿಗೆ ಪುಷ್ಪಗೈದು ಬರಮಾಡಿಕೊಂಡು ಈ ಬಾರಿ ಕಮಲದ ಗುರುತಿಗೆ ಮತ ನೀಡುವೆವೆಂದು ಆಶಿರ್ವಾದ ಮಾಡಿದರು.