ಗಜೇಂದ್ರಗಡ : ತಾಲ್ಲೂಕಿನ ರೋಣ ಮತಕ್ಷೇತ್ರ ವ್ಯಾಪ್ತಿಯ ಗಜೇಂದ್ರಗಡ ನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ನೂರಾರು ಯುವಮಿತ್ರರು ಜೆಡಿಎಸ್ ಅಭ್ಯರ್ಥಿ ಎಂ ವಾಯ್ ಮುಧೋಳ ಅವರ ಸಮ್ಮುಖದಲ್ಲಿ ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಇಂದು ಜನತಾದಳ ಸೇರ್ಪಡೆಗೊಂಡರು.
ಗಜೇಂದ್ರಗಡ ನಗರದ ಜೆಡಿಎಸ್ ಕಛೇರಿಯಲ್ಲಿ ಶ್ರೀ ಎಂ ವಾಯ್ ಮುಧೋಳ ಅವರು ಪುತ್ರ ಸೋಯೆಲ್ ಮುಧೋಳ ಅವರ ನೇತೃತ್ವದಲ್ಲಿ ಮುದ್ದು ಕಂದಗಲ, ಫಜಲ ಹುನಗುಂದ, ಮೈಬು ಹೊಸಪೇಟೆ, ಹೈದರ ಚಾಮಲಾಪುರ, ಶಾಯಿಲ್ ಕಾತರಕಿ, ಸಂತು ಪಾಟೀಲ್, ಶಕಿಲ್ ಅಹ್ಮದ್ ಮತ್ತು ಗೋಗೇರಿ ಗ್ರಾಮದ ಹುಚ್ಚುಸಾಬ್ ನಧಾಪ್ ಸೇರಿದಂತೆ ಅನೇಕ ಯುವಕರು ಹಿರಿಯರು ಜನತಾದಳದ ರೂವಾರಿ ಕುಮಾರಸ್ವಾಮಿ ನಡೆಸಿದ ರಾಜ್ಯದಲ್ಲಿನ ದಕ್ಷ ಆಡಳಿತವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ದಳದ ಮುಖಂಡರಾದ ಸಂಗಪ್ಪ ಯಲಬುಣಚಿ, ಬಾದಶಾ ಬಾಗವಾನ್, ರವಿ ಮೋಹಿತೆ, ರಾಜು ಪವಾರ, ದಾದಪೀರ ಸೇರಿದಂತೆ ಅನೇಕ ಪಕ್ಷದ ಪ್ರಮುಖರು, ಹಿರಿಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.