ವಿವಿಧ ಪಕ್ಷ ತೊರೆದು ಅಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

ಸಮಗ್ರ ಪ್ರಭ ಸುದ್ದಿ
1 Min Read

 

 

ಗಜೇಂದ್ರಗಡ : ಪಟ್ಟಣದಲ್ಲಿ ವಿವಿಧ ಪಕ್ಷ ತೊರೆದು ರೋಣ ಮತಕ್ಷೇತ್ರದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನೂರಾರು ಜನರು ಸೇರ್ಪಡೆಯಾದರು

ಬಳಿಕ, ಶರಣಪ್ಪ ದೊಣ್ಣೆಗುಡ್ಡ ಮಾತನಾಡಿ ಜನರು ಬದಲಾವಣೆಯ ಬಯಸಿದೆ ಸತತ 30ವರ್ಷ ಆಡಳಿತ ಜನರು ನೋಡಿದ್ದಾರೆ.ಹೀಗಾಗಿ ಜನರು ಈ ಬಾರಿ ಆಮ್ ಆದ್ಮಿ ಪಕ್ಷಕ್ಕೆ ನಾವು ಬೆಂಬಲ ಕೊಡಬೇಕು. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಡಳಿತ ಮಾದರಿಯನ್ನು ಜನರು ನೋಡಿದ್ದಾರೆ.ಅಮ್ಮ್ ಆದ್ಮಿ ಪಕ್ಷದ ಆದರ್ಶಗಳು ನಾವೂ ಪಾಲನೆ ಮಾಡಬೇಕು ನಾವೂ ಏನಾದ್ರೂ ಬದಲಾವಣೆ ಬಯಸಬೇಕು ಅಂದ್ರೆ ಮೇ 10 ರಂದು ಅಮ್ ಆದ್ಮಿ ಪಕ್ಷಕ್ಕೆ ಈ ಬಾರಿ ಮತ ಚಲಾಯಿಸಿ ಆಮ್ ಆದ್ಮಿ ಪಕ್ಷ ಬಹು ಮತದಿಂದ ಹಾರಸಿ ತರಬೇಕು, ಆನೇಕಲ್ ದೊಡ್ಡಯ್ಯ ಮುಂದಿನ ಶಾಸಕರಾಗಿ ಆಗ್ತಾರೆ ಎನ್ನುವ ಭರವಸೆ ಇದೆ ನಾವೂ ನೀವೂ ಎಲ್ಲರೂ ಸೇರಿ ಮೇ 10 ದಿನದಂದು ಮತ ಹಾಕುವು ಮೂಲಕ ಆಮ್ ಆದ್ಮಿ ಪಕ್ಷ ಜಯಬೇರೆ ಬಾರಿಸಿಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶರಣಪ್ಪ ದೊಣ್ಣೆಗುಡ್ಡ, ಶರಣು ಡೊಳ್ಳಿನ, ಅನಿಲ ಕರ್ಣೇ,ಹುಸೇನಸಾಬ ಸಂಕನೂರ, ವೀರೇಶ್ ನಿಡಗುಂದಿ, ಶೇಖರ ರಾಠೋಡ, ಸೇರಿ ನೂರಾರು ಕಾರ್ಯಕರ್ತರು ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಕಳಕನಗೌಡ ಗೌಡರ, ಸೇರಿದಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇದ್ದರು.

Share this Article