ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 51 ಅಭ್ಯರ್ಥಿಗಳ ಕಣದಲ್ಲಿ

SamagraPrabha Suddi
3 Min Read

ಗದಗ : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಏ.24 ಕೊನೆಯ ದಿನವಾಗಿತ್ತು. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 51 ಅಭ್ಯರ್ಥಿಗಳು ಕಣದಲ್ಲಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

 

ಶಿರಹಟ್ಟಿ ವಿಧಾನಸಭಾ ಕ್ಷೇತ್ರ

 

 

65-ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿರುತ್ತಾರೆ.

ಡಾ.ಚಂದ್ರು ಲಮಾಣಿ (ಬಿಜಿಪಿ), ದೊಡ್ಡಮನಿ ಮಲ್ಲಿಕಾರ್ಜುನ ಯಲ್ಲಪ್ಪ (ಎಎಪಿ), ಸುಜಾತಾ ನಿಂಗಪ್ಪ ದೊಡ್ಡಮನಿ (ಆಯ್.ಎನ್.ಸಿ), ಹನುಮಂತಪ್ಪ ನಾಯಕ (ಜೆಡಿಎಸ್), ಡಾ.ಮುತ್ತು ಸುರಕೋಡ (ಇಂಡಿಯನ್ ಮೂವಮೆಂಟ್ ಪಾರ್ಟಿ), ಮಂಜುನಾತ ಆಸೆಂಗಪ್ಪ ಆಸಂಗಿ (ಕೆ.ಆರ್.ಎಸ್.), ಸುಷ್ಮಾ ಸುನೀಲ ಸರ್ವೋದೆ (ಉತ್ತಮ ಪ್ರಜಾಕೀಯ ಪಾರ್ಟಿ), ದುರ್ಗಪ್ಪ ಶೇಖಪ್ಪ ಬಿಂಜಡಗಿ (ಪಕ್ಷೇತರ), ದೊಡ್ಡಪ್ಪ ಭದ್ರಪ್ಪ ಲಮಾಣಿ (ಪಕ್ಷೇತರ), ರಾಜಾವೆಂಕಟೇಶ ದೇ.ಖಾರಬಾರಿ (ಪಕ್ಷೇತರ), ರಾಮಕೃಷ್ಣ ಸಿದ್ದಲಿಂಗಪ್ಪ ದೊಡ್ಡಮನಿ (ಪಕ್ಷೇತರ), ವೆಂಕಟೇಶ ಬ ಗುಗ್ಗರಿ (ಪಕ್ಷೇತರ), ಸಂತೋಷ ಗೌರವ್ವ ಹಿರೇಮನಿ (ಪಕ್ಷೇತರ), ಹನುಮಂತಪ್ಪ ಪೀರಪ್ಪ ಕೊರವರ (ಪಕ್ಷೇತರ).

 

ಗದಗ ವಿಧಾನಸಭಾ ಕ್ಷೇತ್ರ

 

66-ಗದಗ ವಿಧಾನ ಸಭಾ ಮತಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿರುತ್ತಾರೆ. ಅನೀಲ ಪಿ ಮೆನಸಿನಕಾಯಿ (ಬಿಜೆಪಿ), ಗೋವಿಂದಗೌಡ್ರ ವೆಂಕನಗೌಡ್ರ. ರಂಗನಗೌಡ (ಜೆಡಿಎಸ್), ದೊಡ್ಡಮನಿ ಪೀರಸಾಖ (ಎಎಪಿ), ಹೆಚ್.ಕೆ.ಪಾಟೀಲ (ಆಯ್.ಎನ್.ಸಿ), ಆನಂದ ಹಂಡಿ (ಕೆ.ಆರ್.ಎಸ್.), ಚಂದ್ರಶೇಖರ ದೇಸಾಯಿ (ರಾಣಿ ಚನ್ನಮ್ಮ ಪಾರ್ಟಿ), ಪೂಜಾ ಮಲ್ಲಪ್ಪ ಬೇವೂರ (ಇಂಡಿಯನ್ ಮೂವಮೆಂಟ್ ಪಾರ್ಟಿ), ಸಚಿನಕುಮಾರ ಕರ್ಜಿವಣ್ಣನವರ (ಉತ್ತಮ ಪ್ರಜಾಕೀಯ ಪಾರ್ಟಿ), ಬಿ.ಎಂ.ಪಾಟೀಲ (ಪಕ್ಷೇತರ), ಬಸವರಾಜ ಮಾಳೋದೆ (ಪಕ್ಷೇತರ), ಮಲ್ಲಿಕಾರ್ಜುನಗೌಡ ಶಂಕರಗೌಡ ಪರ್ವತಗೌಡ್ರ (ಪಕ್ಷೇತರ), ರುದ್ರಪ್ಪ ಬಸಪ್ಪ ಕುಂಬಾರ (ಪಕ್ಷೇತರ), ವಿಶ್ವನಾಥ ಖಾನಾಪುರ (ಪಕ್ಷೇತರ), ವೀರಭದ್ರಪ್ಪ ವೀರಪ್ಪ ಕಬ್ಬಿಣದ (ಪಕ್ಷೆತರ).

 

ರೋಣ ವಿಧಾನಸಭಾ ಕ್ಷೇತ್ರ

 

67-ರೋಣ ವಿಧಾನ ಸಭಾ ಮತಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿರುತ್ತಾರೆ ಕಳಕಪ್ಪ ಗುರುಶಾಂತಪ್ಪ ಬಂಡಿ (ಬಿಜೆಪಿ), ಗುರುಪಾದ ಸಂಗನಗೌಡ ಪಾಟೀಲ (ಆಯ್.ಎನ್.ಸಿ), ಆನೇಕಲ್ ದೊಡ್ಡಯ್ಯ (ಎಎಪಿ), ಮಕ್ತುಮಸಾಬ ಯಮನೂರಸಾಬ ಮುಧೋಳ (ಜೆಡಿಎಸ್), ಕುಮಾರ ಅಂದಪ್ಪ ಹಕಾರಿ (ಶಿವಸೇನಾ), ಅಬ್ದುಲಖಾಧರಸಾಬ ಎ ( ಪಕ್ಷೇತರ), ದೇವೆಂದ್ರಪ್ಪ ಓಲೇಕಾರ್ (ಪಕ್ಷೇತರ), ಬೀಬಿಜಾನ ರಾಜೇಸಾಬ ದರಗಾದ (ಪಕ್ಷೇತರ), ಶಿವಾನಂದ ಶಂಕ್ರಪ್ಪ ರಾಠೋಡ (ಪಕ್ಷೇತರ),

 

ನರಗುಂದ ವಿಧಾನಸಭಾ ಕ್ಷೇತ್ರ

68-ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿರುತ್ತಾರೆ. ಚಂದ್ರಕಾಂತಗೌಡ ಪಾಟೀಲ (ಬಿಜೆಪಿ), ಬಸವರಡ್ಡಿ ಯಾವಗಲ್ (ಆಯ್.ಎನ್.ಸಿ), ರಾಮಪ್ಪ ಹೂವಣ್ಣವರ (ಎಎಪಿ), ರುದ್ರಗೌಡ ನಿಂಗನಗೌಡ ಪಾಟೀಲ (ಜೆಡಿಎಸ್), ಹನುಮಂತ ಯಲ್ಲಪ್ಪ ಮಾದರ (ಬಿ.ಎಸ್.ಪಿ), ರುದ್ರಯ್ಯ ಗದಿಗಯ್ಯ ಸುರೇಬಾನ (ಇಂಡಿಯನ್ ಮೂವಮೆಂಟ ಪಾರ್ಟಿ), ವೀರನಗೌಡ ಶಿವನಗೌಡ ಮೂಗನೂರ (ಕೆ.ಆರ್.ಎಸ್.), ಉಮೇಶ ಫಕಿರಪ್ಪ ತಳವಾರ (ಪಕ್ಷೇತರ), ಮಲ್ಲಿಕಾರ್ಜುನ ನಾಯಕ (ಪಕ್ಷೇತರ), ಮುತ್ತು ಎಸ್.(ಪಕ್ಷೇತರ), ರಾಮಪ್ಪ ಹುಜರತ್ತಿ (ಪಕ್ಷೇತರ), ವಾಸನಗೌಡ ಬಂಡಿ (ಪಕ್ಷೇತರ), ವೀರೇಶ ಸೊಬರದಮಠ (ಪಕ್ಷೇತರ), ಶಿವಾನಂದ ಶಿದ್ದಪ್ಪ ಮಾಯಣ್ಣನವರ (ಪಕ್ಷೇತರ) ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

 

ನಾಮಪತ್ರ ಹಿಂಪಡೆದವರ ಕ್ಷೇತ್ರವಾರು ವಿವರ: ಉಮೇದುವಾರಿಕೆಯನ್ನು ಹಿಂಪಡೆಯಲು ನಿಗದಿಪಡಿಸಲಾದ ಏಪ್ರಿಲ 24 ರಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 16 ಜನ ಉಮೇದುವಾರಿಕೆಯನ್ನು ಹಿಂಪಡೆದಿದ್ದು ಕ್ಷೇತ್ರವಾರು ವಿವರ ಇಂತಿದೆ.

 

65-ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾದ ಅನೀಲಕುಮಾರ ನಾಗಪ್ಪ ಮುಳಗುಂದ, ಅಶೋಕ ಲಮಾಣಿ, ಗುರುನಾಥ ಕಲ್ಲಪ್ಪ ದಾನಪ್ಪನವರ, ಪ್ರೋ.ಸಿ.ಪಿ.ಬಹ್ಮನಪಾಡ, ಭೀಮಸಿಂಗ್ ನಾ ರಾಠೋಡ, ಮಂಜುನಾಥ ಮುಶೇಪ್ಪನವರ, ರಾಮಪ್ಪ ಸೋಬೆಪ್ಪ ಲಮಾಣಿ, ಬಹ್ಮನಪಾಡ ಸುನಿಲಕುಮಾರ, ಸುಮಿತ್ರಾ ಹ ನಾಯಕ, ನಂದೆಣ್ಣವರ ಸುರೇಶ ಮಲ್ಲೇಶಪ್ಪ, 66-ಗದಗ ವಿಧಾನಸಭಾ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾದ ವಿಶ್ವನಾಥ ಶಿರಿ ಹಾಗೂ ಈರಣ್ಣ ಕೆ ಬಾಳಿಕಾಯಿ, 67-ರೋಣ ವಿಧಾನ ಸಭಾ ಮತಕ್ಷೇತ್ರದಿಂದ ಮಂಜುನಾಥ ಮಹಾದೇವಪ್ಪ ಗುರಿಕಾರ ಹಾಗೂ ಅಶೋಕ ಬೇವಿನಕಟ್ಟಿ ವಿರುಪಾಕ್ಷ, 68-ನರಗುಂದ ವಿಧಾನ ಸಭಾ ಮತಕ್ಷೇತ್ರದಿಂದ ಶಿದ್ದನಗೌಡ ಮರಿಗೌಡ ಮರಿಗೌಡ್ರ ಹಾಗೂ ದುರಗಪ್ಪ ಪಾರಪ್ಪ ಜಮಖಂಡಿ ಅವರುಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

Share this Article