ಗದಗ: ಜಿಲ್ಲೆಯ ಪ್ರತಿಷ್ಠಿತ ಮಾರುತಿ ಸುಜುಕಿ ಕಂಪನಿಯ ದಿ ನ್ಯೂ ಬ್ರೆಝಾ 2026 ಕಾರಿನ ಭವ್ಯ ಬಿಡುಗಡೆ ಸಮಾರಂಭವನ್ನು ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಆರ್ ಎನ್ ಎಸ್ ಮೋಟರ್ಸ ಗದಗ ಶೋ ರೂಂ ನಲ್ಲಿ ಮಂಗಳವಾರ ಸಂಜೆ ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮವನ್ನು ಗದಗ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಶರಣಪ್ಪ ಗುಡಿಮನಿ ಅವರು ಸಸಿಗೆ ನೀರು ಹಾಕುವ ಮೂಲಕ ಪರಿಸರ ಸ್ನೇಹಿ ರೀತಿಯಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮದುಸುದನ್ ಪುಣೆಕರ ಮತ್ತು ಜಯದೇವ ಮೆಣಸಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹೊಸ ಕಾರನ್ನು ಅನಾವರಣಗೊಳಿಸಿದರು.
ಈ ಸಂಧರ್ಭದಲ್ಲಿ ಬ್ಯಾಂಚ್ ಮ್ಯಾನೇಜರ್ ಜಗದೀಶ ದೊಡ್ಡಮನಿ ಮಾತನಾಡಿ ಗದಗದ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆ ಮತ್ತು ಅತ್ಯಾಧುನಿಕ ವಾಹನಗಳನ್ನು ನೀಡುವುದು ನಮ್ಮ ಗುರಿ. ದಿ ನ್ಯೂ ಬ್ರೆಝಾ ತನ್ನ ಸುರಕ್ಷತೆ, ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದ ಎಸ್ ಯೂ ವಿ ವಿಭಾಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲಿದೆ ಎಂದು ಹೇಳಿದರು.
ಹೊಸ ಫೀಚರ್ಸ್ ನೊಂದಿಗೆ ಸುರಕ್ಷತಾ ದೃಷ್ಟಿಯಿಂದ ಕಾರಿನಲ್ಲಿ 6 ಏರ್‌ಬ್ಯಾಗ್, ಸನ್‌ರೂಫ್, 360 ಕ್ಯಾಮೆರಾ 20.15 ಕಿಲೋ ಮೀಟರ್ ಮೈಲೇಜ್ ನೊಂದಿಗೆ 5 ಜನರು ಪ್ರಯಾಣಿಸು ಉತ್ತಮ ಅನುಭವ ನೀಡುತ್ತದೆ ಗ್ರಾಯಕರ ಬೇಡಿಕೆಗೆ ತಕ್ಕಂತೆ ಹೊಸ ಲುಕ್ ನೊಂದಿಗೆ 6 ಆಕರ್ಷಕ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಯಾಗಿದೆ ಎಂದು ಆರ್ ಎನ್ ಎಸ್ ಮೋಟರ್ಸ ವ್ಯವಸ್ಥಾಪಕ ಜಗದೀಶ ದೊಡ್ಡಮನಿ ಕಾರ ಕುರಿತಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಟೀಮ್ ಲೀಡರ್ ಮುತ್ತುರಾಜ ಅಂದಪ್ಪನವರ, ಶರೀಫ್,ಅವಿನಾಶ ಸೇರಿದಂತೆ ಆರ್ ಎನ್ ಎಸ್ ಮೋಟರ್ಸನ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನೂರಾರು ಕಾರ್ ಪ್ರಿಯರು ಮತ್ತು ಗ್ರಾಹಕರು ಹೊಸ ಕಾರು ದಿ ನ್ಯೂ ಬ್ರೆಝಾ ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಕ್ಸ :
ಕಾರನ ವಿಶೇಷತೆಗಳು:
1.5L K15C ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ +,ಸುರಕ್ಷತೆ: 6 ಏರ್‌ಬ್ಯಾಗ್‌ಗಳು, ABS, EBD, ESP, ಹಿಲ್ ಹೋಲ್ಡ್ ಅಸಿಸ್ಟ್, SmartPlay Pro+ ಟಚ್‌ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ಸನ್‌ರೂಫ್, ಕನೆಕ್ಟೆಡ್ ಕಾರ್ ಟೆಕ್, ಸೇರಿದಂತೆ ವಿವಿಧ ಅನುಕೂಲತೆಗಳನ್ನು ಹೊಂದಿದೆ.

