ಗದಗ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ನಗರದಲ್ಲಿ ಬೆಳ್ಳಂಬೆಳ್ಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಪಶು ವೈದ್ಯಕೀಯ ಪರೀಕ್ಷಕ ಸತೀಶ್ ಕಟ್ಟಿಮನಿ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಬಂದ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ 4 ಕಡೆ, ಬೆಂಗಳೂರಿನಲ್ಲಿ 1 ಕಡೆ ದಾಳಿ ನಡೆಸಿದ್ದಾರೆ. ಗದಗನ ಬೆಟಗೇರಿ ವೆಲ್ಫೆರ್ ಟೌನ ಶಿಪ್ ಬಳಿ ಮನೆ ಹುಯಿಲಗೋಳ ಪಶು ಆಸ್ಪತ್ರೆ ಕಚೇರಿ, ಗದಗನ ಸಂಬಂಧಿಕರ ಮನೆ ಹಾಗೂ ಬೆಂಗಳೂರಿನ ಮಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಪಶು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕಟ್ಟಿಮನಿ.ಬೆಳಗಾವಿ, ಬಾಗಲಕೋಟೆ, ಗದಗ, ಬಿಜಾಪುರ ಜಿಲ್ಲೆಯಿಂದ ಬಂದ ಅಧಿಕಾರಿಗಳಿಂದ ಪರಿಶೀಲನೆ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಇನ್ಸ್ಪೆಕ್ಟರ್ ಪರಮೇಶ್ವರ ಕೌಟಗಿ ನೇತೃತ್ವದಲ್ಲಿ ದಾಳಿ.
