ಬಡವರಿಗೆ ಅನ್ನಭಾಗ್ಯ ಅಕ್ಕಿ ವಿತರಿಸಲು ಪ್ರತಿ ಕಾರ್ಡುದಾರಿಂದ ಹಣ ವಸೂಲಿ ಮಾಡುತ್ತಿರುವ ಜಾಲವಾಡಗಿ ಸೊಸೈಟಿ

Samagraphrabha
1 Min Read

ಮುಂಡರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಾರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಿ ಹಣ ಮಾಡುತ್ತಿದ್ದದು ಒಂದು ಕಡೆಯಾದರೆ ಇನ್ನೋಂದು ಕಡೆ ಉಚಿತವಾಗಿ ವಿತರಣೆ ಮಾಡಲು ಸರ್ಕಾರ ನ್ಯಾಯಬೆಲೆ ಅಂಗಡಿಳಿಗೆ ಪರವಾನಿಗೆ ಕೊಟ್ಟಿದ್ದಾರೆ ಆದರೆ ಅದೇ ಪರವಾಗಿನಿಗೆ ಹೊಂದಿದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಗ್ರಾಮದ ಸೊಸೈಟಿಯೊಂದರಲ್ಲಿ ಪ್ರತಿ ಕಾರ್ಡಗೆ ಪಡಿತರ ವಿತರಿಸಲು ಹಣ ನೀಡುವುದು ಕಡ್ಡಾಯವಾಗಿದೆ ಎಂದು ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.

ಪ್ರತಿಯೊಂದು ಕಾರ್ಡ್‌ಗೆ 10-20 ರೂ. ನಿಗದಿಸಿ ಹಣ ನೀಡಿದವರಿಗೆ ಮಾತ್ರ ರೇಷನ್ ವಿತರಣೆ ಮಾಡುತ್ತಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದಲ್ಲಿ ಇರುವ ಸೊಸೈಟಿಯಲ್ಲಿ ರಾಜಾ ರೋಷವಾಗಿ ನಡೆದಿದೆ.

ತಾಲೂಕಿನ ಬಾಗೇವಾಡಿಯ ಸೊಸೈಟಿ ಮೂಲಕ ಜಾಲವಾಡಗಿ ಗ್ರಾಮದಲ್ಲಿ ರೇಷನ್ ವಿತರಣೆ ಮಾಡಲಾಗುತ್ತೆ ಆದರೆ ಈ ಸಮಯದಲ್ಲಿ ಜಾಲವಾಡಗಿ ಗ್ರಾಮದ ಪ್ರತಿ ಕಾರ್ಡುದಾರರು ಫಲಾನುಭವಿಗಳಿಂದ 10-20 ರೂ ಹಣ ತೆಗೆದುಕೊಂಡು ರೇಷನ್ ವಿತರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇನ್ನು ಗ್ರಾಮಸ್ಥರು ಈ ಹಣ ಸುಲಿಗೆ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರ ಉಚಿತ ಅನ್ನಭಾಗ್ಯ ನೀಡುತ್ತಿದ್ದು ಆದರೆ ಫಲಾನುಭವಿಗಳ ಮೂಲಕ ಸೊಸೈಟಿಯವರು ಹಣ ತೆಗೆದುಕೊಳ್ಳುವುದು ಬಯಲಾಗಿದೆ.
ಕೂಡಲೇ ಗದಗ ಜಿಲ್ಲೆಯಲ್ಲಿಯ ಆಹಾರ ಇಲಾಖೆಯ ಉಪ ನಿರ್ದೇಶಕ ಎಂ ಎಸ್ ರಮೇಶ ಹಾಗೂ ತಾಲೂಕು ಅಧಿಕಾರಿಗಳು ಗಮನಹರಿಸಿ ಹಣ ವಸೂಲಿಗಾರರ ವಿರುದ್ಧ ಮತ್ತು ಸೊಸೈಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

- Advertisement -
Ad image

Share this Article