ಗದಗ : ನಗರದ ಬೆಟಗೇರಿ ನಾಡ ಕಚೇರಿಯಲ್ಲಿ ಅನರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಫಲಾನುಭವಿ ಎಂದು ಸರ್ಕಾರದಿಂದ ವೇತನ ಮಂಜೂರಿಗೆ ಅವಕಾಶ ನೀಡಿವ ಮೂಲಕ ಭ್ರಷ್ಟಾಚಾರ ಎಸಗಿದ್ದ ಕಂಡು ಬಂದ ಹಿನ್ನೆಲೆಯಲ್ಲಿಯೇ ಬೆಟಗೇರಿ ನಾಡಕಚೇರಿ ಉಪ ತಹಶೀಲ್ದಾರ ಡಿ ಟಿ ವಾಲ್ಮೀಕಿ ಸೇವೆಯಿಂದ ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಶ್ರೀಧರ ಎನ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರಿಂದ ದೂರ ಬಂದ ಹಿನ್ನೆಲೆಯಲ್ಲಿ ಸಚಿವ ಎಚ್ಕೆ ಪಾಟೀಲ ಧೀಡಿರ ಬೇಟಿ ಅಕ್ರಮ ಬಯಲು :
ಸೋಮವಾರ ಕಾನೂನು ಸಚಿವ ಎಚ್ ಕೆ ಪಾಟೀಲ್ ಗದಗ ತಹಶಿಲ್ದಾರ ಕಚೇರಿಗೆ ದಿಢೀರ ಭೇಟಿ ನೀಡಿ
ಪರಿಶೀಲನೆ ನಡೆಸಿದರು ಈ ವೇಳೆ ದಾಖಲೆ ಸಮೇತವಾಗಿ ಉಪ ತಹಶಿಲ್ದಾರ ಡಿ ಟಿ ವಾಲ್ಮೀಕಿ ತಪ್ಪೆಸಿ ಲೋಪ ಮಾಡಿದ್ದು ಬಯಲಾಗಿದೆ.
ಗಂಡ ಇದ್ದರೂ ವಿಧವಾ ವೇತನ ಮಂಜೂರು,30 ವರ್ಷದ ಯುವಕರಿಗೆ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಸಂದ್ಯಾ ಸುರಕ್ಷಾ ಯೋಜನೆ ಸೇರಿದಂತೆ
ಜುಲೈ ದಿಂದ ಇಲ್ಲಿವರೆಗೂ 500 ಕ್ಕೂ ಹೆಚ್ಚು ಅಕ್ರಮ ದಾಖಲೆ ಸಮೇತ ಸಿಕ್ಕಿವೆ ಕೆಲ ಖಾಸಗಿ ಏಜೆಂಟರ ಮೂಲಕ ಈ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಹೇಳಲಾಗಿದೆ.

ನನಗೆ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ ಕಚೇರಿಗೆ ಭೇಟಿ ನೀಡಿದ್ದಾಗ ಈ ತಹಶೀಲ್ದಾರ ಶ್ರೀನಿವಾಸ್ ಕುಲಕರ್ಣಿ ತನಿಖೆ ಸೂಚಿಸಿದ್ದೆನೆ.
ತನಿಖೆಯಲ್ಲಿ ಅನರ್ಹರಿಗೆ ಯೋಜನೆ ನೀಡಿದ್ದು ಬಯಲಾಗಿದೆ.
30 ವರ್ಷದ ಯುವಕನಿಗೂ ವೃದ್ಧಾಪ್ಯ ವೇತನ ಮಂಜೂರಿ ಮಾಡಿದ್ದಾರೆ.
ಆ ಹಿನ್ನಲೆಯಲ್ಲಿ ಡೆಪ್ಯೂಟಿ ತಹಶಿಲ್ದಾರ ಡಿ ಟಿ ವಾಲ್ಮಿಕಿ ಅವ್ರನ್ನು ತಕ್ಷಣ ಅಮನತಗೆ ಡಿಗೆ ಸೂಚನೆ.
ಸಮಗ್ರ ತನಿಖೆ ಮಾಡಿ ವರದಿ ನೀಡುವಂತೆ ಡಿಸಿ, ಎಸ್ಪಿ ಸೂಚಿಸಲಾಗಿದೆ.
ವರದಿ ಬಂದ ತಕ್ಷಣ ಕಾನೂನು ರೀತಿ ಕ್ರಮಕ್ಕೆ ಸೂಚಸಿದ್ದೇನೆ.
-ಡಾ ಎಚ್ ಕೆ ಪಾಟೀಲ ಕಾನೂನು ಮತ್ತು ಪ್ರವಾಸೋದ್ಯಮ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಗದಗ

