ಬ್ಯಾಂಕ ಆಪ್ ಬರೋಡಾ, ಲೀಡ ಬ್ಯಾಂಕ್ ಹಾವೇರಿ ವತಿಯಿಂದ ಸ್ವಚ್ಚತಾ ಹೀ ಸೇವಾ ಅಭಿಯಾನ

Samagraphrabha
2 Min Read

ಹಾವೇರಿ : ಭಾರತ ಸರಕಾರದ ಹಣಕಾಸು ಸಚಿವಾಲಯದ ಕರೆಗೆ ಓಗೊಟ್ಟು, ಲೀಡ್ ಬ್ಯಾಂಕ ಹಾವೇರಿ, ನಗರಸಭೆ ಹಾವೇರಿ, ಮದರ ಗ್ರಾಮೀಣ ಅಭಿವೃದ್ದಿ ಸಂಸ್ಥೆ ರೋಣ, ಬ್ಯಾಂಕ ಆಫ ಬರೋಡಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಆರ್‍ಸಿಟಿ), ಸಿಎಫಎಲ್ ಹಾವೇರಿ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಾವೇರಿಯ ಬಸವೇಶ್ವರ ನಗರ ಸಿ ಬ್ಲಾಕನ ವಾರ್ಡ ನಂಬರ 11 ರ ಕಿತ್ತೂರ ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ಸ್ವಚ್ಚತಾ ಹೀ ಸೇವಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮದಿನದಂದು ಅವರ ಸವಿನೆನಪಿಗಾಗಿ “ಏಕ ದಿನ, ಏಕ ಘಂಟಾ ಏಕ ಸಾಥ್” (ಒಂದು ದಿನ, ಒಂದು ಘಂಟೆ, ಎಲ್ಲರೂ ಒಟ್ಟಿಗೆ) ಎಂಬ ಧ್ಯೇಯದೊಂದಿಗೆ ಈ ವರ್ಷದ ಸ್ವಚ್ಚತಾ ಹೀ ಸೇವಾ ಅಭಿಯಾನವು “ಸ್ವಚ್ಚೋತ್ಸವ” ಎಂಬ ವಿಷಯದಡಿಯಲ್ಲಿ ಆಚರಿಸಲಾಗುತ್ತಿದ್ದು.
ಕಾರ್ಯಕ್ರಮವನ್ನು ಲೀಡ ಬ್ಯಾಂಕಿನ ವ್ಯವಸ್ಥಾಪಕರಾದ ಪ್ರಭುದೇವ ಹಾಗೂ ನಗರಸಭೆ ಆಯುಕ್ತರಾದ ಎಚ್ ಕಾಂತರಾಜು ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಆರ್‍ಸಿಟಿಯ ಶಿಬಿರಾರ್ಥಿಗಳು ಮತ್ತು ಸಫಾಯಿ ಕರ್ಮಚಾರಿಗಳೊಂದಿಗೆ ಹಲವು ಬ್ಯಾಂಕ ಸಿಬ್ಬಂದಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಈ ಸ್ವಚ್ಚತಾ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಚಟುವಟಿಕೆಯ ಸಮಯದಲ್ಲಿ ಉದ್ಯಾನವನದ ಸ್ಥಳಗಳನ್ನು ಸ್ವಚ್ಚಗೊಳಿಸಿ ಕಸದಿಂದ ಮುಕ್ತಗೊಳಿಸುವ ಮೂಲಕ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು.

ಅಭಿಯಾನದಲ್ಲಿ ಲೀಡ ಬ್ಯಾಂಕಿನ ವ್ಯವಸ್ಥಾಪಕರಾದ ಪ್ರಭುದೇವ ಮಾತನಾಡಿ ನಮ್ಮ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತೆ ಕಾಪಾಡುವುದು ಸಾಮಾಜಿಕ ಜವಾಬ್ದಾರಿ ಮಾತ್ರವಲ್ಲ ಅದು ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ಸ್ವಚ್ಚತೆಯ ಕುರಿತಾದ ಪ್ರತಿಜ್ಞಾ ಸಾಲುಗಳನ್ನು ಪಾಲಿಸೋಣ ಎಂದರು.
ನಗರಸಭೆ ಆಯುಕ್ತರಾದ ಎಚ್ ಕಾಂತರಾಜು ಮಾತನಾಡಿ ಸ್ವಚ್ಚತೆ ಎಂಬುದು ಕೇವಲ ಒಂದು ದಿನ ಕಾರ್ಯಕ್ರಮವಾಗದೆ ನಮ್ಮ ದಿನ ನಿತ್ಯದಲ್ಲಿ ಒಂದು ಅವಿಭಾಜ್ಯ ಅಂಗವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್‍ಸಿಟಿಯ ಶಿಬಿರಾರ್ಥಿಗಳು ಸ್ವಚ್ಚತೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು ಮತ್ತು ಅಭಿಯಾನದಲ್ಲಿ ಸ್ವಚ್ಚತೆಯ ಬಗ್ಗೆ ಪ್ರಮಾಣ ವಚನ ಸ್ವೀಕರಿಸಲಾಯಿತು.
ನೈರ್ಮಲ್ಯ ಮತ್ತು ಸಮುದಾಯದ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಶಿಬಿರಾರ್ಥಿಗಳು ಅಭಿಯಾನದ ನಿಜವಾದ ಉತ್ಸಾಹದಲ್ಲಿ ಕೆಲಸ ಮಾಡಿದರು. ಕಾರ್ಯಕ್ರಮದಲ್ಲಿ ಸುರಕ್ಷತಾ ಕಿಟ್‍ಗಳು ಮತ್ತು ಉಪಹಾರವನ್ನು ನೀಡಲಾಯಿತು.
ಅಭಿಯಾನದಲ್ಲಿ ಬ್ಯಾಂಕ ಆಪ ಬರೋಡಾ ಹಾವೇರಿ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ದೀಪಕ ರಾಜೇಂದ್ರಕುಮಾರ, ವಿಘ್ನೇಶ್ವರ ಭಟ್, ಬ್ಯಾಂಕ ಆಪ ಬರೋಡಾ ಸಿಬ್ಬಂದಿಗಳು, ನಗರಸಭೆ ಸಿಬ್ಬಂದಿಗಳು, ಆರಸಿಟಿಯ ಸಿಬ್ಬಂದಿಗಳು, ಲೀಡ ಬ್ಯಾಂಕನ ಆರ್ಥಿಕ ಸಮಾಲೋಚಕರಾದ ಮಾಲತೇಶ ಎಸ ಎಮ್ ಹಾಗೂ ರಮೇಶ ಪಾಟೀಲ ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು.

Share this Article