ಕುರುಬ ಸಂಘದ ರಜತ ಮಹೋತ್ಸವಕ್ಕೆ ಸಿ ಎಂ ಸಿದ್ದರಾಮಯ್ಯ ಚಾಲನೆ

Samagraphrabha
0 Min Read

ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗದ “ಶ್ರೀ ರಾಕೇಶ ಸಿದ್ದರಾಮಯ್ಯ” ಸಭಾಂಗಣದಲ್ಲಿ ನಡೆದ, “ತಾಲ್ಲೂಕು ಕುರುಬರ ಸಂಘದ ರಜತ ಮಹೋತ್ಸವದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಜೊತೆಗೆ ರಾಜ್ಯ ಮಟ್ಟದ ಕನಕೋತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು ಸಂಘಜೀವಿ ಫಕೀರಪ್ಪ ಹೆಬಸೂರು ಅವರ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಆಗಮಿಸಿದ್ದ ಮೊಮ್ಮಗ ಹಾಗೂ ರಾಕೇಶ್ ಸಿದ್ದರಾಮಯ್ಯ ಅವರ ಪುತ್ರ ಧವನ್‌ ಸಿದ್ದರಾಮಯ್ಯ ಅವರು ಕನಕದಾಗ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕನಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.

Share this Article