ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಕೆರೆಯ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡಿರುವುದಕ್ಕೆ ಗ್ರಾಮ ಪಂಚಾಯತಿಯವರ ನಿರ್ಲಕ್ಷವೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.
ಈ ಕುರಿತು ತಹಶೀಲ್ದಾರ ಸುಧೀರ ಸಾಹುಕಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಮಾತನಾಡಿದ ಅವರು ಮಂಗಳವಾರದ ದಿವಸ ಗುಡಿಸಾಗರ ಗ್ರಾಮದ ಕೆಲವು ಗ್ರಾಮಸ್ಥರು ಕೆರೆಯ ನೀರು ಕುಡಿದು ವಾಂತಿ ಭೇದಿ ಅಂತಾ ನವಲಗುಂದ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬಹಳ ವರ್ಷಗಳಿಂದ ಆ ಕೆರೆಯ ಹೂಳು ತೆಗೆದಿಲ್ಲ, ಕೆರೆಯ ಸುತ್ತಲು ಕಸ ಕಂಟಿ ಬೆಳೆದಿದ್ದು ಸ್ವಚ್ಛತೆ ಇಲ್ಲಾ, ಕೆರೆಯ ಸುತ್ತಲೂ ಯಾವುದೇ ತಂತಿ ಬೇಲಿಯನ್ನು ಹಾಕಿಲ್ಲ, ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿ ಹೋಗಿದ್ದು ಕುಡಿಯುವ ನೀರಿನ ಬಗ್ಗೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಕ್ರಮ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ ಮಾಡಿದರು..
ಸಿರಾಜುದ್ದಿನ ಧಾರವಾಡ ಮಾತನಾಡಿ ಗುಡಿಸಾಗರ ಗ್ರಾಮದ ಕೆರೆಯ ನೀರು ಜೋಂಡು ಗಟ್ಟಿದ್ದು, ದನ ಕರುಗಳು ಕೆರೆಯಲ್ಲಿ ಹೋಗಿ ನೀರು ಕುಡಿಯುವುದು ಸಾಮಾನ್ಯವಾಗಿ ಹೋಗಿದೆ, ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ, ಕೆರೆಯಲ್ಲಿರುವ ನೀರು ಹಚ್ಚ ಹಸಿರಾಗಿದ್ದೇ ಗ್ರಾಮಸ್ಥರ ಅನಾರೋಗ್ಯಕ್ಕೇ ಕಾರಣವಾಗಿದೆ, ಶುದ್ಧ ಕುಡಿಯುವ ನೀರು ಪೂರೈಸದ ಮಟ್ಟಿಗೆ ಸ್ಥಳೀಯ ಆಡಳಿತದ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಗಂಭೀರ ಆರೋಪ ಮಾಡಿದರು…
ಈ ಸಂದರ್ಭದಲ್ಲಿ ಮಹಮ್ಮದಲಿ ಮಿರ್ಜಿ, ಬಶೀರಅಹ್ಮದ ಹುನಗುಂದ ಉಪಸ್ಥಿತರಿದ್ದರು…

