ಜೆಸಿಐ ಸಂಸ್ಥೆಯ ಸೇವೆಗಳು ಶ್ಲಾಘನೀಯ ಕಾರ್ಯ : ಶಾಸಕ ಪಠಾಣ

Samagraphrabha
2 Min Read

ಹಾವೇರಿ : ಸವಣೂರ ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜೆಸಿಐ ಸಪ್ತಾಹದ ಅಂಗವಾಗಿ ಜೆಸಿಐ ನಮ್ಮ ಸವಣೂರು ವತಿಯಿಂದ ಏರ್ಪಡಿಸಿದ್ದ ತಾಲೂಕು ಆರೋಗ್ಯ ಇಲಾಖೆ ವೈಧ್ಯರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ, ಜಿಲ್ಲಾ ರಕ್ತ ಕೇಂದ್ರ, ತಾಲೂಕು ರಕ್ತ ಶೇಖರಣಾ ಘಟಕದ ನೇತೃತ್ವದಲ್ಲಿ ಸ್ವಯಂ ಪ್ರೇರಣೆ ರಕ್ತದಾನ ಹಾಗೂ ಹುಬ್ಬಳ್ಳಿ ಡಾ. ಅಗರವಾಲ್ಸ್ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟನಾ ಸಮಾರಂಭ ನಡೆಯಿತು
ಸವಣೂರ ಕಾಂಗ್ರೆಸ್ ಪಕ್ಷ ಸರ್ವರಿಗೂ ಪಂಚ ಗ್ಯಾರಂಟಿ ಬಾಗ್ಯ ನೀಡಿದರೆ, ಜೆಸಿಐ ಸಂಸ್ಥೆ ರಕ್ತದಾನ ಪ್ರೇರಣೆಯೊಂದಿಗೆ ನೇತ್ರ ಚಿಕಿತ್ಸೆ ಬಾಗ್ಯ ನೀಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಅವರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂತರವಾಗಿ ಸಾಮಾಜಿಕ ಕಾರ್ಯ ಕೈಗೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಣೂರ ತಾಲೂಕಿನಲ್ಲಿ ಜೆಸಿಐ ನಮ್ಮ ಸವಣೂರು ಚಿರಪರಿಚಿತಗೊಳ್ಳುತ್ತಿರುವದು ಸಂತಸ ತಂದಿದೆ. ಅಂತಾರಾಷ್ಟಿಯ ಸಂಸ್ಥೆಯೊಂದು ಕ್ಷೇತ್ರದಲ್ಲಿ ಕೈಗೊಳ್ಳುವ ಪ್ರತಿ ಉತ್ತಮ ಕಾರ್ಯಕ್ಕೆ ನಮ್ಮ ಸಹಕಾರದ ಬೆಂಬಲ ಇರುತ್ತದೆ ಎಂದರು.
ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ಜೆಸಿ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ವರ ಸಹಕಾರದಿಂದ ೨೦೨೫ರ ಅವದಿಯಲ್ಲಿ ರಾಷ್ಟಮಟ್ಟದಲ್ಲಿ ಗುರುತ್ತಿಸಿಕೊಳ್ಳುವಂತಹ ಕಾರ್ಯಕ್ರಮ ಆಯೋಜನೆಗೆ ಸಾಧ್ಯವಾಗಿದೆ. ಪದವಿ ವಿದ್ಯಾರ್ಥಿಗಳು ಹಾಗೂ ೧೮ ರಿಂದ ೪೦ ವರ್ಷ ಒಳಗಿನ ಯುವ ಜನತೆ ಜೆಸಿಐ ಸಂಸ್ಥೆ ಸೇರುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಜೆಸಿ ಆನಂದ ಮತ್ತಿಗಟ್ಟಿ ನೇತೃತ್ವ ವಹಿಸಿದ್ದರು. ತಾಪಂ ಇಒ ಬಿ. ಎಸ್. ಶಿಡೇನೂರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಮುಲ್ಲಾ, ಜೆಸಿಐ ನಮ್ಮ ಸವಣೂರು ಘಟಕದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ, ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಅಶೋಕ ಕಾಳಶೆಟ್ಟಿ, ಶಂಕ್ರಯ್ಯ ಹಿರೇಮಠ, ಗಣೇಶಗೌಡ ಪಾಟೀಲ, ಮಧುಕರ ಜಾಲಿಹಾಳ, ಅನ್ನಪೂರ್ಣ ಕುಂಬಾರ, ಪುಷ್ಪಾ ಬತ್ತಿ ಹಾಗೂ ಇತರರು ಪಾಲ್ಗೊಂಡಿದ್ದರು.
೧೭೬ ಜನರು ಉಚಿತ ನೇತ್ರ ಚಿಕಿತ್ಸೆ ಶಿಬಿರದ ಸದುಪಯೋಗ ಪಡೆದರು.
ಜೆಸಿಐ ನಮ್ಮ ಸವಣೂರು ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಪರಶುರಾಮ ಹೊಳಲ, ಹಿರಿಯ ಸದಸ್ಯ ಶ್ರೀಪಾದಗೌಡ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಅಶೋಕ ಕಳಲಕೊಂಡ ಸೇರಿದಂತೆ ಹತ್ತಾರು ಯುವಕರು ರಕ್ತದಾನ ಮಾಡಿದರು. ಜೆಸಿ ಹರೀಶ ಹಿರಳ್ಳಿ, ಸುನಂದಾ ಚಿನ್ನಾಪೂರ ಹಾಗೂ ಮಾಂತೇಶ ಹೊಳೆಯಮ್ಮನವರ ಕಾರ್ಯಕ್ರಮ ನಿರ್ವಹಿಸಿದರು.

Share this Article