ಗದಗ: ಸಾಲಬಾಧೆ ತಾಳಲಾರದೆ ರೈತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದ ನಿವಾಸಿಯಾದ
ಈಶಪ್ಪ ಶಾನವಾಡ (54) ವಿಷ ಸೇವಿಸಿದ ರೈತನಾಗಿದ್ದು.
ಮೃತ ರೈತ ಈಶಪ್ಪ ಕೆವಿಜಿ ಬ್ಯಾಂಕನಲ್ಲಿ 12 ಲಕ್ಷ ಕೃಷಿ ಸಾಲ, ಸೇರಿದಂತೆ ಲಕ್ಷಾಂತರ ಸಾಲ ಮಾಡಿದ್ದನು.
ಸುದ್ದಿ ತಿಳಿದು ಸ್ಥಳೀಯರು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದು ಹೆಚ್ಚಿನ ಚಿಕಿತ್ಸೆಗೆ ಜಿಮ್ಸಗೆ ರವಾನಿಸುವ ಮಾರ್ಗದಲ್ಲಿ ರೈತ ಮೃತಪಟ್ಟಿದ್ದಾನೆ.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ಕಂಗಾಲಾಗಿದ್ದ ರೈತ
ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

