ಪಟ್ಟಣದಲ್ಲಿ ಹಗಲಲ್ಲಿ ಉರಿಯುತ್ತಿರುವ ಬೀದಿ ದೀಪ ಪೋಲಾಗುತ್ತಿದೆ ಸಾರ್ವಜನಿಕರ ತೆರಿಗೆ ಹಣ

Samagraphrabha
2 Min Read

ನವಲಗುಂದ: ನಗರದಲ್ಲಿ ಪುರಸಭೆಯಿಂದ ಅಳವಡಿಸಿರುವ ಬೀದಿದೀಪಗಳ ಅಸಮರ್ಪಕ ನಿರ್ವಹಣೆಯಿಂದ ಹಗಲಲ್ಲೂ ಬೀದಿ ದೀಪ ಬೆಳಗುತ್ತಿವೆ, ಬೀದಿ ದೀಪ ಸರಿಯಾಗಿ ನಿರ್ವಹಣೆ ಮಾಡದೇ ಸಿಬ್ಬಂದಿ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.

ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು ಬಡಾವಣೆಗಳ ಮುಖ್ಯರಸ್ತೆ, ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬೀದಿದೀಪಗಳನ್ನು ಪುರಸಭೆಯಿಂದ ವಿವಿಧ ಯೋಜನೆಗಳಡಿ ಅಳವಡಿಸಲಾಗಿದೆ. ಅದರ ನಿರ್ವಹಣೆಗೆ ಗುತ್ತಿಗೆದಾರನಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಸಿಬ್ಬಂದಿ ಉದಾಸೀನದಿಂದ ನಗರದ ಹಲವು ರಸ್ತೆಗಳಲ್ಲಿ ಬೀದಿದೀಪ ಹಗಲಲ್ಲೂ ಬೆಳಗುತ್ತಿವೆ.

ಪಟ್ಟಣದ ಹಳ್ಳದ ಓಣಿ, ಚವಡಿ ಹತ್ತಿರ ಸೇರಿದಂತೆ ಹಲವು ಕಡೆ ಬೀದಿ ದೀಪಗಳು ಉರಿಯುತ್ತಿವೆ. ಅಧಿಕಾರಿಗಳು ಇದನ್ನು ಕಂಡರೂ ಕಾಣದಂತೆ ಮುನ್ನಡೆಯುತ್ತಾರೆ, ನಗರ ವ್ಯಾಪ್ತಿಯಲ್ಲಿನ ಕೆಲವು ಬಡಾವಣೆಗಳಲ್ಲಿ ಆಗಾಗ್ಗೆ ಬೀದಿದೀಪಗಳು ಕೈಕೊಡುತ್ತವೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಶೀಘ್ರ ಸರಿಪಡಿಸುವ ಕೆಲಸ ಮಾಡುವುದಿಲ್ಲ, ಮತ್ತೊಂದು ಕಡೆ ಹಗಲಿನಲ್ಲಿ ಉರಿಯುವ ಬೀದಿ ದೀಪಗಳನ್ನು ಬಂದ್‌ ಮಾಡುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಧಾರವಾಡದವರ ಪ್ಲಾಟಿನಲ್ಲಿ ಪ್ರತಿ ದಿನ ಸಾಯಂಕಾಲ ಮತ್ತು ಮುಂಜಾನೆ ಬೀದಿ ದೀಪಗಳನ್ನು ಅಲ್ಲಿಯ ನಿವಾಸಿಗಳೆ ಆನ್ ಮತ್ತು ಅಫ್ ಮಾಡುತ್ತಾರೆ, ಬೀದಿ ದೀಪಗಳ ನಿರ್ವಹಣೆಗೆಂದು ವಾರ್ಷಿಕವಾಗಿ ಪುರಸಭೆಯ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿ ಮೀಸಲಿರಿಸಲಾಗುತ್ತದೆ. ಗುತ್ತಿಗೆದಾರ ನಿರ್ವಹಣೆ ಮಾಡಿದ ಆಧಾರದ ಮೇರೆಗೆ ಪುರಸಭೆಯಿಂದ ಬಿಲ್ ಬಿಡುಗಡೆ ಮಾಡಬೇಕು. ಪ್ರತಿ ದಿನ ಬೀದಿ ದೀಪಗಳನ್ನು ಆನ್ ಮತ್ತು ಅಫ್ ಮಾಡಲು ಗುತ್ತಿದಾರನ ಜವಾಬ್ದಾರಿಯಾಗಿರುತ್ತದೆ. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಎಲ್‌.ಇ.ಡಿ ಬಲ್ಫ್ ಅಳವಡಿಸಲಾಗಿದೆ, ಅದರೆ ನಿರ್ವಹಣೆ ಮಾತ್ರ ತಪ್ಪಿದಂತಾಗಿದ್ದು ಇನ್ನಾದರೂ ಸರಿಪಡಿಸುವರಾ ಕಾದು ನೋಡ ಬೇಕಾಗಿದೆ…

- Advertisement -
Ad image

ಇವತ್ತು ಪಟ್ಟಣದಲ್ಲಿ ಹಗಲಿನಲ್ಲಿಯು ಬೀದಿ ದೀಪ ಉರಿಯುತ್ತಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದಂತಾಗುತ್ತದೆ, ಪುರಸಭೆಯ ಅಧಿಕಾರಿಗಳು ಇನ್ನಾದರೂ ಜಾಗೃತರಾಗಿ ಪಟ್ಟಣದಲ್ಲಿರುವ ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗದಂತೆ ತಡೆಯದಿದ್ದರೆ ಸಂಬಂಧಪಟ್ಟ ದಾಖಲೆಗಳೊಂದಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ….

ಮಾಬುಸಾಬ ಯರಗುಪ್ಪಿ
ಸಾಮಾಜಿಕ ಕಾರ್ಯಕರ್ತ, ನವಲಗುಂದ

ಸ್ಥಳೀಯವಾಗಿ ಹಗಲಿನಲ್ಲಿಯು ಬೀದಿ ದೀಪ ಉರಿಯುತ್ತಿರುವ ಕುರಿತು ಪರಿಶೀಲನೆ ಮಾಡಿ ಸಂಬಂಧಪಟ್ಟ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇನೆ..

ಶರಣು ಪೂಜಾರ
ಮುಖ್ಯಾಧಿಕಾರಿಗಳು, ಪುರಸಭೆ ನವಲಗುಂದ

ಪಟ್ಟಣದಲ್ಲಿರುವಂತಹ ವಾರ್ಡಗಳಲ್ಲಿ ಬೀದಿ ದೀಪಗಳನ್ನು ನಿರ್ವಹಣೆ ಮಾಡುವಂತಹ ಜವಾಬ್ದಾರಿ ಪುರಸಭೆಯ ಮೇಲಿದೆ, ಆದರೆ ಹಗಲಿನಲ್ಲಿಯು ಬೀದಿ ದೀಪಗಳು ಉರಿಸುವ ಮೂಲಕ ಪುರಸಭೆಯವರು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ, ಒಂದು ಕಡೆ ಹಗಲಿನಲ್ಲಿ ಬೀದಿ ದೀಪ ಉರಿದರೆ ಪಟ್ಟಣದ ಕೆಲವು ಕಡೆ ಬೀದಿ ದೀಪವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಕುರಿತು ಸಂಬಂಧಪಟ್ಟವರು ಕ್ರಮ ಜರುಗಿಸಬೇಕು…

ಮಲ್ಲಿಕಾರ್ಜುನಸ್ವಾಮಿ ಮಠಪತಿ
ರೈತ ಮುಖಂಡರು, ನವಲಗುಂದ

Share this Article