ನವಲಗುಂದ :ವಾಂತಿ–ಭೇದಿ ಪ್ರಕರಣ ಗೂಡಿಸಾಗರ ಗ್ರಾಮಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ

Samagraphrabha
2 Min Read

ಗುಡಿಸಾಗರ ಗ್ರಾಮಕ್ಕೆ ನುರಿತ ವೈದ್ಯರನ್ನು ನೇಮಕ ಮಾಡಿ ಹಾಗೂ ಅನಾರೋಗ್ಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡಲು ಗ್ರಾಮದಲ್ಲಿರುವ ಜನರ ಆರೋಗ್ಯದ ದೃಷ್ಟಿಯಿಂದ ಸದ್ಯ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಸುಮಾರು 29 ಕ್ಕೂ ಹೆಚ್ಚು ಮಂದಿ ವಾಂತಿ ಬೇಧಿಯಿಂದ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಮತ್ತು ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ರೋಗಿಗಳ ಮನೆ ಬಳಿಗೆ ತೆರಳಿ ಸಮಸ್ಯೆ ಆಲಿಸಿ ಗ್ರಾಮದ ಕೆರೆಯನ್ನು ವೀಕ್ಷಿಸಿದರು.

ಗ್ರಾಮದಲ್ಲಿ 29 ಜನರಿಗೆ ವಾಂತಿ– ಭೇದಿಯಾಗಿದ್ದು 9 ಮಂದಿ ಗುಣಮುಖರಾಗಿದ್ದಾರೆ, ಉಳಿದ 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರನ್ನು ಇಂದಿನಿಂದ ಗ್ರಾಮಕ್ಕೆ ಭೇಟಿ ನೀಡಿಸಿ ಆರೋಗ್ಯ ತಪಾಸಣೆ ನಡೆಸಿ, ಓಆರ್‌ಎಸ್‌ ಮತ್ತು ಮಾತ್ರೆಗಳನ್ನು ನೀಡಲಾಗುವುದು. ನುರಿತ ವೈದ್ಯರನ್ನು ತಾತ್ಕಾಲಿಕ ಆಸ್ಪತ್ರೆಯಲ್ಲಿ ಇರುವಂತೆ ತಿಳಿಸಲಾಗುವುದು. ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿ ಗ್ರಾಮದ ಪ್ರತಿ ಮನೆಯ ಆರೋಗ್ಯ ವಿಚಾರಿಸಲಾಗುವುದು. ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ನಿಗಾ ಇಡುತ್ತೇವೆ. ಗ್ರಾಮಸ್ಥರು ಆತಂಕ ಪಡಬಾರದು’ ಎಂದರು.

- Advertisement -
Ad image

ಶಾಸಕ ಕೋನರಡ್ಡಿ ಮಾತನಾಡಿ ಗ್ರಾಮದ ಕೆರೆಯ ನೀರನ್ನು ಬಳಕೆ ಮಾಡದಂತೆ ಈಗಾಗಲೇ ಗ್ರಾಪ ಪಂಚಾಯತ ಮೂಲಕ ಹೇಳಲಾಗಿದೆ. ಕುಡಿಯಲು ಟ್ಯಾಂಕರ ಮುಖೇನ ನೀರು ಒದಗಿಸುತ್ತೇವೆ. ನೀರು ಪರೀಕ್ಷೆಗೆ ಹಾಜರು ಪಡಿಸಿದ್ದು ಅಸ್ತವ್ಯಸ್ತದ ಕಾರಣ ತಿಳಿಯುತ್ತೇವೆ. ಅಲ್ಲಿವರೆಗೆ ಗ್ರಾಮದ ಸ್ವಚ್ಛತೆ ಮತ್ತು ಕೆರೆ ನೀರು ತೆಗೆದು ಬೇರೆ ನೀರು ಬಿಡುವ, ಕೆರೆ ದುರಸ್ತಿ ಮಾಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಜಿಪಂ ಸಿಇಒ ಭುವನೇಶ್ವರ ಪಾಟೀಲ, ಜಿಲ್ಲಾ ಆರೋಗ್ಯ ಪರಿವೀಕ್ಷಣಾ ಅಧಿಕಾರಿ ಎಸ್ ಎಂ ಹೋನ್ನಕೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳು , ತಹಶೀಲ್ದಾರ್ ಸುಧೀರ ಸಾವಕಾರ, ತಾ.ಪ ಇಓ ಭಾಗ್ಯಶ್ರೀ ಜಾಗಿರದಾರ ಸೇರಿದಂತೆ ವೈದ್ಯರು ಮತ್ತು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು.

ಅಶುದ್ಧ ನೀರೇ ಸಮಸ್ಯೆಗೆ ಕಾರಣ’

‘ಗ್ರಾಮದಲ್ಲಿ ವಾಂತಿ–ಭೇದಿಯಿಂದ ಹಲವಾರು ಮಂದಿ ಅಸ್ವಸ್ಥಗೊಂಡು ಶುದ್ಧವಾದ ನೀರು ಪೂರೈಕೆಯಾಗದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಕೆರೆ ಸ್ವಚ್ಛತೆ ಗೊಳಿಸದೆ ಹಾಗೆ ಬಿಟ್ಟಿದ್ದು, ಕೆರೆಯ ಸುತ್ತಲೂ ಅನೈರ್ಮಲ್ಯ ವಾತಾವರಣವಿದೆ. ಗ್ರಾಮ ಪಂಚಾಯತ್ ನಿರ್ಲಕ್ಷತನ ತೋರಿಸುತ್ತಿದೆ , ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಚಾಲನೆಯಲ್ಲಿ ಇಲ್ಲ ,ಇಲ್ಲಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ . ಶುದ್ಧ ನೀರು ಪೂರೈಸಿ, ಜನರ ಆರೋಗ್ಯ ರಕ್ಷಿಸಿ’ ಎಂದು ಗ್ರಾಮಸ್ಥ ಶಿವಯೋಗಿ ಮಠಪತಿ ಮತ್ತು ಗ್ರಾಮದ ಮುಖಂಡರು ಆಗ್ರಹಿಸಿದರು.

ನೀರು ಕಲುಷಿತ ಖಚಿತತೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ವರದಿ ಬರಲು ಸುಮಾರು 48 ಗಂಟೆ ಬೇಕಾಗುತ್ತದೆ. ವರದಿ ಬಂದ ನಂತರ ನಿಖರ ಕಾರಣ ಪಡೆಯುತ್ತೇವೆ. ಮೇಲ್ನೋಟಕ್ಕೆ ರೋಟಾ ವೈರಸ್ ನಿಂದ ವಾಂತಿ ಬೇಧಿ ಯಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಜೇ ಆರ್ ಜೇ ದಿವ್ಯ ಪ್ರಭು , ಜಿಲ್ಲಾಧಿಕಾರಿ.

Share this Article