ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಜಾ ಸ್ಪಂದನಾ ಕಾರ್ಯಕ್ರಮ

Samagraphrabha
3 Min Read

ಹಾವೇರಿ : ಸವಣೂರು ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಸೋಮವಾರ ತಾಲ್ಲೂಕು ಆಡಳಿತ, ತಾಪಂ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಹಯೋಗದಲ್ಲಿ ಪ್ರಜಾ ಸ್ಪಂದನಾ ಕಾರ್ಯಕ್ರಮ ನಡೆಯಿತು
ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜನರಿಗೆ ಪಂಚ ಗ್ಯಾರಂಟಿಗಳನ್ನು ನೀಡಿದೆ ಅದರಂತೆ, ಕೇಂದ್ರಕ್ಕೆ ರಾಜ್ಯದಿಂದ 5 ಲಕ್ಷ ಕೋಟಿ ಜಿಎಸ್‍ಟಿ ತೆರಿಗೆ ಹೋಗುತ್ತಿದೆ. ಅದಕ್ಕೆ ಪೂರಕವಾಗಿ ಉತ್ತರ ಭಾರತದ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಉಚಿತ ರೈಲ್ವೆ ಪ್ರಯಾಣವನ್ನು ಘೋಷಣೆ ಮಾಡುತ್ತಿಲ್ಲ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳ ಪ್ರಜಾ ಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಅನಾಧಿ ಕಾಲದಿಂದಲು ಭಾರತ ದೇಶದಲ್ಲಿ ತಾಯಂದಿಯರಿಗೆ ಇರುವ ಗೌರವ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಚುನಾವಣೆ ನಂತರ ಪಂಚ ಗ್ಯಾರಂಟಿಗಳನ್ನು ಜಾರಿಗೆ ಮನೆಯ ಒಡತಿಯ ಖಾತೆಗೆ ಗೌರವ ಧನವನ್ನು ನೀಡುವ ಮೂಲಕ ತಾಲ್ಲೂಕಿಗೆ 2 ವರ್ಷದಲ್ಲಿ 550 ಕೋಟಿ ಹಣವನ್ನು ನೀಡುವ ಮೂಲಕ ಸಾವಿರಾರು ಕುಟುಂಬಗಳ ನಿರ್ವಹಣೆ ಹಾಗೂ ಅದೇ ಹಣದಿಂದ ಗ್ರಾಮದ ದೇವತೆಗೆ ಚಿನ್ನದ ಒಡವೆಯನ್ನು ಮಾಡಿಸುವ ಮೂಲಕ ಇಂದು ಪ್ರಜಾ ಸ್ಪಂದನಾ ಕಾರ್ಯಕ್ರಮದಲ್ಲಿ ಸೇರಿರುವ ಮಹಿಳೆಯರೆ ಸಾಕ್ಷಿಯಾಗಿದ್ದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ರಾಜ್ಯದ ಶಿಗ್ಗಾವಿ, ಸಂಡೂರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದ ಸಂದರ್ಭದಲ್ಲಿ ವಿರೋದ ಪಕ್ಷ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರೂ ಕೂಡಾ ಜನತೆ ಮಾತ್ರ ಯಾವುದೇ ಮಾತುಗಳಿಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡುವ ಮೂಲಕ ವಿಜಯದ ಮಾಲೆಯನ್ನು ಕಾಂಗ್ರೆಸ್‌ಗೆ ನೀಡಿರುವದು ನಿದರ್ಶನವಾಗಿದೆ ಎಂದು ಹೇಳಿದರು.

ಸಮಗ್ರ ಕ್ಷೇತ್ರದ ಅಭಿವೃದ್ಧಿ ಮಾಡುವ ಉದ್ದೇಶದಿಂದ ಕುಡಿಯುವ ನೀರು 21 ದಿನಕ್ಕೊಮ್ಮೆ ಬರುವ ಸವಣೂರು, ಶಿಗ್ಗಾವಿ, ಬಂಕಾಪೂರ ಪಟ್ಟಣಗಳಿಗೆ ಶಾಶ್ವತ ನೀರು ಪೂರೈಕೆಗೆ 361 ಕೋಟಿ, ಎಂಪಿ ಮಾದರಿಯ ಸವಣೂರು ಏತ ನೀರಾವರಿಗೆ 350ಕೋಟಿ, ಶಾಲೆ, ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ, ದೇವಸ್ಥಾನ ಅಭಿವೃದ್ಧಿಗೆ 50 ಕೋಟಿ ಅನುದಾನ ಸೇರಿ ಕ್ಷೇತ್ರಕ್ಕೆ 1 ಸಾವಿರ ಕೋಟಿ ಅನುದಾನವನ್ನು ನೀಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧ್ಯಕ್ಷ ಅಜೀಮ್‍ಪೀರ ಖಾದ್ರಿ ಮಾತನಾಡಿ, ಈ ಹಿಂದಿನ ಸರ್ಕಾರಗಳು ಯಾವುದೇ ಜನಪರ ಕಾರ್ಯಕ್ರಮಗಳನ್ನು ನೀಡಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅವರ ಸರಕಾರ ಬಂದಾಗ ಮಾತ್ರ ಜನರ ಅಭಿವೃದ್ಧಿಗೆ ಶ್ರಮಿಸಿ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನು ಮುಂದುವರೆಸಿದ್ದಾರೆ.
ಹೆಸ್ಕಾಂ ವತಿಯಿಂದ 38 ಸಾವಿರ ರೈತರಿಗೆ ಉಚಿತ ಟಿಸಿ ನೀಡಲು ಮುಂದಾಗಿದ್ದೇವೆ. ಮುಂಬರುವ ದಿನಗಳಲ್ಲಿ 50 ಸಾವಿರ ಟಿಸಿ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

- Advertisement -
Ad image

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಸುಭಾಸ ಮಜ್ಜಗಿ ವಹಿಸಿದ್ದರು. ತಾಪಂ ಇಓ ಬಿ.ಎಸ್.ಶಿಡೇನೂರ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಭಿರ, ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಭಿರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಜೆ.ಮುಲ್ಲಾ, ಕೆಡಿಪಿ ಸದಸ್ಯ ರವಿ ಕರಿಗಾರ, ಗ್ಯಾರಂಟಿ ಸದಸ್ಯರಾದ ಗುರಪ್ಪ ಅಕ್ಕಿ, ಚಂದ್ರಶೇಖರ ಹಟ್ಟಿ, ನೂರಅಹ್ಮದ ಮತ್ತೆಸಾಬನವರ, ಪರಶುರಾಮ ಜುಂಬಣ್ಣನವರ, ಹನುಮಂತಪ್ಪ ಹಳ್ಳಿ, ಇಬ್ರಾಹಿಂಸಾಬ ಕರ್ಜಗಿ, ಪುಟ್ಟಪ್ಪ ಮರಗಿ, ಜ್ಯೋತಿಕಿರಣ ಕುಲಕರ್ಣಿ, ಹನುಮಂತಗೌಡ ಉಳ್ಳಾಗಡ್ಡಿ, ಅಶೋಕ ನೆಲ್ಲೂರ, ನಾಗಪ್ಪ ತಿಮ್ಮಾಪೂರ, ರಮಾಕಾಂತ ಶೆಂಡಿಗೆ, ಶಂಕರ ಲಮಾಣಿ, ಗಿರೀಶ ತಳವಾರ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು, ತಾಲ್ಲೂಕಿನ ಮಹಿಳೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this Article