ನವಲಗುಂದ: ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನವಲಗುಂದ, ಖನ್ನೂರ ಗ್ರಾಮದ ಆರ್.ವಿ.ಎಸ್.ಪಬ್ಲಿಕ್ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನವಲಗುಂದ ತಾಲೂಕಾ ಮಟ್ಟದ 14-17 ವಯೋಮಿತಿ ಇಲಾಖಾ ಕ್ರೀಡಾಕೂಟ ಕಾರ್ಯಕ್ರಮವನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು.
ನಾವೂ ನಮ್ಮ ದೇಹವನ್ನು ಸದೃಡವಾಗಿ ಇಟ್ಟುಕೊಳ್ಳಲು ಉತ್ತಮ ಅಹಾರ, ಆಟಗಳು, ಯೋಗ ಹಾಗೂ ವ್ಯಾಯಾಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅತ್ಯವಶ್ಯಕವಾಗಿದೆ. ಮಕ್ಕಳಿಗೆ ಪಾಟದೊಂದಿಗೆ ಆಟವೂ ಕೂಡಾ ಅಷ್ಟೇ ಮುಖ್ಯ, ಆಟಗಳನ್ನು ಆಡುವುದರಿಂದ ಮಕ್ಕಳು ದೈಹಿಕವಾಗಿ ಗಟ್ಟಿಯಾಗುವದರೊಂದಿಗೆ ಮಾನಸಿಕವಾಗಿಯೂ ಬಲಡ್ಯರಾಗುತ್ತಾರೆ ಎಂದು ಶಾಸಕ ಎನ್. ಎಚ್ ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು..
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡ, ಚೇರಮನ್ ಸುರೇಶ ಅಂಗಡಿ, ಕ್ಷೇತ್ರ ಸಮನ್ವಾಯಧಿಕಾರಿ ರೇಣುಕಾ ಮುರನಾಳ, ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ವಿ.ಕುರವತ್ತಿಮಠ, ಮುಖ್ಯೋಪಾಧ್ಯಾಯ ಸಿದ್ಧಲಿಂಗೇಶ ಸೂಸಂಗಿ, ಪಿ.ಕೆ.ಹಿರೇಗೌಡ್ರ, ಎಂಜೆಲ್ ಜೂಲಿ ಝೇವಿಯರ್, ಆರ್.ಹೆಚ್.ನೇಗಲಿ, ಎಸ್.ಎಪ್.ನೀರಲಗಿ, ವಿ.ಆರ್.ಹಾದಿಮನಿ, ಎಸ್.ಜಿ.ಹಿರೇಮಠ, ಎನ್.ವಾಯ್.ಕಳಸಾಪೂರ, ಎಲ್.ಬಿ.ಕಮತೆ, ಎನ್.ಎನ್.ಹಾರಿಗೇರಿ, ಶ್ರೀಮತಿ ಜಯಶ್ರೀ ಸಿದ್ಧರಾಮಶೆಟ್ಟರ, ಎಲ್.ಎ.ಮಠ, ಎಸ್.ಬಿ.ಬಡಕರಿ, ಎಮ್.ಎನ್.ವಗ್ಗರ, ಎಮ್.ಬಿ.ಪವಾಡಶೆಟ್ಟರ, ಶರಣು ಕುರಿ, ಬಸವರಾಜ ಹೂಗಾರ ಸೇರಿದಂತೆ ಶಿಕ್ಷಕ – ಶಿಕ್ಷಕಿಯರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
