ಬಾಗಿದ ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ

Samagraphrabha
1 Min Read

ನವಲಗುಂದ: ತಾಲೂಕಿನ ಬಲ್ಲರವಾಡ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿ ಹೆಸ್ಕಾಂ ಅಧಿಕಾರಿಗಳು ಅಳವಡಿಸಲಾದ ಕಂಬ ಬಾಗಿದ್ದು, ವಿದ್ಯುತ್ ತಂತಿ ತಗುಲಿ ಅವಘಡಕ್ಕೆ ಅಹ್ವಾನಿಸುವಂತಿದೆ. ಯಾವಾಗ ಬೀಳುವುದೋ ಅನ್ನುವ ಸ್ಥಿತಿಯಲ್ಲಿದೆ, ಈ ವಿದ್ಯುತ್ ಕಂಬದ ಪಕ್ಕದಲ್ಲಿ ಹಾದು ಹೋಗುವ ವಾಹನ ಸವಾರರು ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು ದುರಂತ,

ಹೊಲದ ಪಕ್ಕದ ಪ್ರದೇಶಗಳಲ್ಲಿ ಬಿರುಗಾಳಿ ಜೋರಾಗಿ ಬೀಸಿದರೆ ವಿದ್ಯುತ್ ಕಂಬ ಅಲಗಾಡುತ್ತಿದೆ, ಅದರ ಜತೆ ವಿದ್ಯುತ್ ತಂತಿ ಹರಿದು ಬೀಳುವ ಸ್ಥಿತಿ ನಿರ್ಮಾಣವಾಗಿದ್ದರು
ಹೆಸ್ಕಾಂ ಇಲಾಖೆ ತನಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಆಪಾದಿಸಿದ್ದಾರೆ, ಹೆಸ್ಕಾಂ ಅಧಿಕಾರಿಗಳು ಈ ಬಾಗಿರುವಂತಹ ಕಂಬವನ್ನು ಯಾವಾಗ ಸರಿಪಡಿಸುವರು ಎಂಬುವುದನ್ನು ಕಾದು ನೋಡಬೇಕಾಗಿದೆ.

ಬಲ್ಲರವಾಡ ಗ್ರಾಮದ ರಸ್ತೆ ಪಕ್ಕದಲ್ಲಿ ಬಾಗಿರುವಂತಹ ವಿದ್ಯುತ್ ಕಂಬವನ್ನು ಆದಷ್ಟು ಬೇಗನೆ ಬದಲಾಯಿಸಿ ಸರಿಪಡಿಸಬೇಕು, ಇಂತಹ ವಿದ್ಯುತ್ ಕಂಬದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತದೆ, ಇಲ್ಲಿ ವಾಹನ ಸವಾರರು ಜೀವ ಕೈಯ್ಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುತ್ತಿದ್ದಾರೆ,
ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಬಾಗಿದ ವಿದ್ಯುತ್ ಕಂಬ ಸರಿಪಡಿಸಿ ಮುಂದಾಗುವಂತಹ ಅನಾಹುತ ತಪ್ಪಿಸಬೇಕು..

ಮಾಬುಸಾಬ ಯರಗುಪ್ಪಿ
ಸಮಾಜ ಸೇವಕರು, ನವಲಗುಂದ

- Advertisement -
Ad image

Share this Article