ಒಳ್ಳೇಯ ಸಂಸ್ಕಾರ ಬೆಳೆಯಲು ತಾಯಂದಿರ ಸಭೆ ಸಹಕಾರಿ

Samagraphrabha
1 Min Read

ಹಾವೇರಿ : ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಡಿ .ಪಿ. ಇ. ಪಿ. ಶಾಲೆಯಲ್ಲಿ ಗುರುವಾರ
ತಾಯಂದಿರ ಸಭೆ ಹಾಗೂ ತಾಯಿಯಂದಿರ. ಪಾದಪೂಜೆ ಮಾಡಿಸುವ ವಿಶೇಷ ಕಾರ್ಯಕ್ರಮ ಜರಗಿತು.
ತಾಯಂದಿರ ಸಭೆ ಕರೆದು ಇಂತಹ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಮಕ್ಕಳಲ್ಲಿ ಒಳ್ಳೇಯ ಸಂಸ್ಕಾರ ಬೆಳೆಯಲು ಸಹಕಾರಿಯಾಗುತ್ತದೆ ತಾಯಂದಿರಿಗೂ ಒಂದು ಹುಮ್ಮಸ್ಸು ಮೂಡಿಸುವ ಪ್ರೇರಣಾಶಕ್ತಿ ಆಗುತ್ತದೆ ಎಂದು ಹೇಳಿದರು.
ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಬೀರಪ್ಪ . ಅಜ್ಜಣ್ಣವರ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ವಿದ್ಯಾರ್ಥಿಗಳು ಶಿಕ್ಷಕರ ಹತ್ತಿರ ಅಲ್ಪ ಮಾತ್ರ ಇರುತ್ತಾರೆ. ಆದರೆ ಪಾಲಕರ ಹತ್ತಿರ ಬಹಳ ಘಂಟೆ ಇರುತ್ತಾರೆ. ಆದ್ದರಿಂದ ಪಾಲಕರು ಕೂಡ ಮಕ್ಕಳ ಭವಿಷ್ಯದ ಬಗ್ಗೆ ಜಾಗೃತಿ ಹೊಂದಬೇಕು ಮಕ್ಕಳು ಹೆತ್ತವರನ್ನು ಪೂಜಿಸಿ ತಮ್ಮ ಮುಂದಿನ ಸಾಧನೆಗಳಿಗೆ ಆಶೀರ್ವಾದ ಪಡೆಯಬೇಕು ಎಂದು ತಾಯಂದಿರಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಬಿ ವೈ ತಳವಾಯಿ ಶಿಕ್ಷಕರಾದ ಸುಭಾಷ್ ಶಿರಹಟ್ಟಿ ಎಂ.ಬಿ ಅಡಿಯಪ್ಪನವರ ಹಾಗೂ ಶಾಲಾ ಎಸ್ ಡಿ ಎಂ ಸಿ ಸದಸ್ಯರು ಶಾಲಾ ಶಿಕ್ಷಕಿರು ತಾಯಿಂದಿರು ಮಕ್ಕಳು ಇದ್ದರು.

Share this Article