ಬೇಡಿದ ವರ ದಯಪಾಲಿಸುವ ಗಣಪತಿ

Samagraphrabha
2 Min Read

ನವಲಗುಂದ: ಪಟ್ಟಣದ ಸಿದ್ದಾಪುರ ಓಣಿಯ ಚನ್ನಬಸಪ್ಪ ಬೆಳ್ಳಿ ಅವರ ಮನೆತನದಲ್ಲಿ ಗಣೇಶೋತ್ಸವಕ್ಕೆ ವಿಶೇಷ ಮಹತ್ವವಿದೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಪ್ರತಿಷ್ಠಾಪನೆ, ಅನೇಕ ಭಕ್ತರ ಜೀವನದಲ್ಲಿ ಭರವಸೆಯ ಬೆಳಕಾಗಿದೆ.

ಬೇಡಿದ ವರ ನೀಡುವ ಗಣಪತಿ ಎಂದು ಇಲ್ಲಿ ಪೂಜಿಸಲ್ಪಡುವ ದೇವರ ಬಳಿಗೆ, ಆರೋಗ್ಯ ತೊಂದರೆ, ಮಕ್ಕಳ ಸಮಸ್ಯೆ ಅಥವಾ ಕುಟುಂಬ ಸಂಕಷ್ಟಗಳನ್ನು ಎದುರಿಸುತ್ತಿರುವವರು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಹಲವರು ತಮ್ಮ ಮನದಾಸೆ ಈ ಗಣಪತಿಯ ಕೃಪೆಯಿಂದ ನೆರವೇರಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರತಿವರ್ಷ 5 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಹಾಗೂ ಮಹಾಪೂಜೆಗಳು ನಡೆಯುತ್ತವೆ.

ಗಣಪತಿ ವಿಸರ್ಜನೆ ಮಾಡಿದ ನಂತರ, ನಾಲ್ಕು ದಿನಗಳ ಕಾಲ ಜಮಖಾನದಲ್ಲಿ ನೀರು ಹರಿದ ಘಟನೆ ಇಲ್ಲಿಯ ಭಕ್ತರ ಮನದಲ್ಲಿ ದೈವದ ಚಮತ್ಕಾರವಾಗಿ ಉಳಿದಿದೆ.

ಬೆಳ್ಳಿ ಅವರ ಮನೆತನದ ಗಣಪತಿ ಪ್ರತಿಷ್ಠಾಪನೆ ನವಲಗುಂದದ ಭಕ್ತರಿಗೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಬಾಳಿನ ಸಂಕಷ್ಟಗಳಿಗೆ ಆಧಾರವಾಗಿರುವ ಆಧ್ಯಾತ್ಮಿಕ ನೆಲೆಯಾಗಿದೆ.

- Advertisement -
Ad image

ಸಾಕಷ್ಟು ಭಕ್ತರು ಈ ಗಣಪತಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿರುವಂತಹ ಉದಾಹರಣೆಗಳಿವೆ,

15 ವರ್ಷಗಳ ಹಿಂದೆ ಗಣಪತಿಯ ಮೂರ್ತಿಯನ್ನು ಅವರ ಹೋಟೆಲನಲ್ಲಿ ಅಪರಿಚಿತ ವ್ಯಕ್ತಿ ತಂದು ಬಿಟ್ಟು ಹೋಗುತ್ತಾರೆ, ಅವರು ಸಾಯಂಕಾಲ ಆದ್ರು ಆ ವ್ಯಕ್ತಿ ಬಾರದ ಹಿನ್ನಲೆಯಲ್ಲಿ ಅದನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ, ಅಲ್ಲಿಂದ ಇಲ್ಲಿಯವರೆಗೆ ಸುಮಾರು ಹದಿನಾಲ್ಕು ವರ್ಷಗಳ ಕಾಲ ಪ್ರತಿಷ್ಠಾಪನೆ ಮಾಡುತ್ತಾ ಬರುತ್ತಿದ್ದಾರೆ, ಈ ಗಣಪ ಭಕ್ತರ ಪಾಲಿನ ಕಾಮದೇನು ಆಗಿದ್ದು ಮಾತ್ರ ಸತ್ಯ…

ನಾವು ಕಳೆದ 16 ವರ್ಷಗಳಿಂದ ನಮ್ಮ ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ, ನಾವು ಈ ಮೊದಲು ಗಣಪತಿ ಪ್ರತಿಷ್ಠಾಪನೆ ಮಾಡುತ್ತಿರಲಿಲ್ಲ, ನಮ್ಮ ಅಂಗಡಿಯಲ್ಲಿ ಯಾರೋ ಅಪರಿಚಿತರು ಬಿಟ್ಟು ಹೋಗಿರುವಂತಹ ಗಣಪತಿಯನ್ನು ತಂದು ಪ್ರತಿಷ್ಠಾಪನೆ ಮಾಡಿದ್ದೆವು ಆವತ್ತಿನಿಂದ ಇಲ್ಲಿಯವರೆಗೆ ನಮಗೆ ಗಣೇಶ ಒಳ್ಳೆಯದನ್ನು ಮಾಡಿದ್ದಾನೆ, ಇಲ್ಲಿಗೆ ಬಂದು ಹರಕೆ ಹೊತ್ತರೆ ಸಾಕು ಅವರ ಬೇಡಿಕೆ ಈಡೇರುತ್ತವೆ…

ನಿರ್ಮಲಾ ಚನ್ನಬಸಪ್ಪ ಬೆಳ್ಳಿ
ನವಲಗುಂದ

ನಮ್ಮ ಮನೆಯಲ್ಲಿ ಪ್ರತಿ ವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿರುವುದರಿಂದ ನಮಗೆ ಬಹಳ ಒಳ್ಳೆಯದಾಗಿದೆ, ನಮ್ಮ ಮನೆಗೆ ಯಾರಾದರೂ ಬಂದು ಗಣೇಶನ ದರ್ಶನ ಪಡೆದು ಅವರ ಮನಸ್ಸಿನಲ್ಲಿ ಏನಾದರೂ ಬೇಡಿಕೊಂಡರೆ ಅದು ಈಡೇರುತ್ತದೆ, ಭಕ್ತರ ಬೇಡಿಕೆ ಈಡೇರಿಸುವಂತಹ ಗಣಪ ಇದಾಗಿದೆ…

ಪ್ರೀತಿ ಬೆಳ್ಳಿ
ನವಲಗುಂದ

Share this Article