ಗದಗ: ಸಾಲಬಾಧೆ ತಾಳಲಾರದೆ ರೈತ ಮನನೊಂದು ಜಮೀನಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಿಲ್ಲೆಯ ರೋಣ ತಾಲೂಕಿನ ಹುನಗುಂಡಿ ಗ್ರಾಮದ ನಿವಾಸಿಯಾದ
ಸಿದ್ದಲಿಂಗಯ್ಯ ವಸ್ತ್ರದ (50) ನೇಣಿಗೆ ಶರಣಾದ ರೈತನಾಗಿದ್ದು.
ಗುರುವಾರ ತಡ ರಾತ್ರಿ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ರೈತ ಸಿದ್ದಲಿಂಗಯ್ಯ ಕೆವಿಜಿ ಬ್ಯಾಂಕನಲ್ಲಿ 4 ಲಕ್ಷ ಕೃಷಿ ಸಾಲ, ಕೆಸಿಸಿ ಬ್ಯಾಂಕ್ ನಲ್ಲಿ 80 ಸಾವಿರ ಸಾಲ, 2.50 ಲಕ್ಷ ಚಿನ್ನದ ಸಾಲ, ಟ್ಯಾಕ್ಟರ್ ಸಾಲ 1.50 ಲಕ್ಷ ಸಾಲ ಸೇರಿದಂತೆ ಲಕ್ಷಾಂತರ ಸಾಲ ಮಾಡಿದ್ದನು.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ಕಂಗಾಲಾಗಿದ್ದ ರೈತ
ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

